ಎಷ್ಟೋ ಮಂದಿಗೆ ಊಟ ಆದ ನಂತರ ತಕ್ಷಣ ಸ್ನಾನಕ್ಕೆ ಹೋಗುವ ಅಭ್ಯಾಸ ಇರುತ್ತದೆ. ಕೆಲವರಿಗೆ ಅಭ್ಯಾಸ ಇರೋದಿಲ್ಲ. ಆದರೆ ತಿಂಡಿ ತಿಂದು ಆಫೀಸಿಗೆ ಹೋಗೋಕೋ ಅಥವಾ ಲೇಟಾಗಿದೆ ಎಂದು ಹೊರಗೆ ಹೋಗೋಕೊ ಬೇಗ ಸ್ನಾನಕ್ಕೆ ಹೋಗುತ್ತಾರೆ.
ಊಟದ ನಂತರ ಎಷ್ಟು ಸಮಯ ಬಿಟ್ಟು ಸ್ನಾನಕ್ಕೆ ಹೋಗಬೇಕು?
ಊಟ ಅಥವಾ ತಿಂಡಿ ತಿಂದ ನಂತರ ಕನಿಷ್ಠ ಅರ್ಧ ಗಂಟೆಯಿಂದ ಒಂದು ಗಂಟೆವರೆಗಾದ್ರೂ ಸ್ನಾನಕ್ಕೆ ಹೋಗಬಾರದು.
ಯಾಕೆ?
ಊಟ ಮಾಡೋದನ್ನು ಅರಗಿಸಿಕೊಳ್ಳೋದಕ್ಕೆ ನಮ್ಮ ದೇಹ ಕೆಲಸ ಮಾಡುತ್ತದೆ. ಸ್ನಾನ ಮಾಡಿದಾಗ ಬಿಸಿನೀರಿನಿಂದ ಡಿಹೈಡ್ರೇಟ್ ಆಗುತ್ತಾರೆ. ಆ ಸಮಯದಲ್ಲಿಯೂ ದೇಹ ಎನರ್ಜಿ ಪ್ರೊಡ್ಯೂಸ್ ಮಾಡುತ್ತದೆ. ಊಟ ಮಾಡಿ ಸ್ನಾನ ಮಾಡಿದರೆ ಒಂದೇ ಸಮಯಕ್ಕೆ ದೇಹಕ್ಕೆ ಎರಡೆರಡು ಕೆಲಸ ಕೊಟ್ಟಂತೆ. ರಕ್ತ ಸಂಚಲನೆಯಲ್ಲಿ ಸಮಸ್ಯೆಗಳಾಗಿ ಆಹಾರ ಜೀರ್ಣವಾಗದೆ ಹೊಟ್ಟೆನೋವು, ಹೊಟ್ಟೆಭಾರ ಮತ್ತಿತರ ಸಮಸ್ಯೆಗಳು ಬಾಧಿಸುತ್ತವೆ.