IPL 2024 | ಚಾಂಪಿಯನ್‌ ಕೆಕೆಆರ್‌ಗೆ ಎಷ್ಟು ಕೋಟಿ ಸಿಕ್ತು? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

IPL 2024 ರ ಫೈನಲ್ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಭಾನುವಾರ‌ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಿತು.

ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಅದ್ಧೂರಿ ಜಯಗಳಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಇದರೊಂದಿಗೆ ಐಪಿಎಲ್ 2024 ರ ಫೈನಲ್ ಪಂದ್ಯದ ವಿಜೇತ ತಂಡಕ್ಕೆ 20 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಬಹುಮಾನ ಲಭಿಸಿದೆ.

ಯಾರ್ಯಾರಿಗೆ ಯಾವ ಪ್ರಶಸ್ತಿ?

1.ಕೋಲ್ಕತ್ತಾ ನೈಟ್ ರೈಡರ್ಸ್ – 20 ಕೋಟಿ ರೂ. ಮತ್ತು ಟ್ರೋಫಿ
2.ಸನ್ ರೈಸರ್ಸ್ ಹೈದರಾಬಾದ್ (ರನ್ನರ್ ಅಪ್) – 12.5 ಕೋಟಿ ರೂ. ಮತ್ತು ಟ್ರೋಫಿ
3.ನಿತೀಶ್ ರೆಡ್ಡಿ (ಉದಯೋನ್ಮುಖ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
4.ಸನ್‌ರೈಸರ್ಸ್ ಹೈದರಾಬಾದ್ ( ಫೇರ್‌ಪ್ಲೇ ಪ್ರಶಸ್ತಿ) – 10 ಲಕ್ಷ ಮತ್ತು ಟ್ರೋಫಿ
5.ಹರ್ಷಲ್ ಪಟೇಲ್ (Dream11 ಗೇಮ್ ಚೇಂಜರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
6.ಅಭಿಷೇಕ್ ಶರ್ಮಾ (ಸೀಸನ್‌ನ ಸೂಪರ್ ಸಿಕ್ಸರ್)- 10 ಲಕ್ಷ ರೂ.
7.ರಮಣದೀಪ್ ಸಿಂಗ್ (ಪರಿಪೂರ್ಣ ಕ್ಯಾಚ್)- 10 ಲಕ್ಷ ರೂ. ಮತ್ತು ಟ್ರೋಫಿ
8.ಜ್ಯಾಕ್ ಫ್ರೇಸರ್ ಮಗರಕ್ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
9.ವೆಂಕಟೇಶ್ ಅಯ್ಯರ್ (ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
10.ಹರ್ಷಲ್ ಪಟೇಲ್ (24 ವಿಕೆಟ್)- 10 ಲಕ್ಷ ರೂ. ಮತ್ತು ಪರ್ಪಲ್ ಕ್ಯಾಪ್
11.ವಿರಾಟ್ ಕೊಹ್ಲಿ (741 ರನ್) – 10 ಲಕ್ಷ ರೂ. ಮತ್ತು ಆರೆಂಜ್ ಕ್ಯಾಪ್
12.ಸುನಿಲ್ ನಾರಾಯಣ್ (ಅತ್ಯಂತ ಮೌಲ್ಯಯುತ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
13.ಪಿಚ್ ಮತ್ತು ಗ್ರೌಂಡ್ ಅವಾರ್ಡ್ – ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್- 50 ಲಕ್ಷ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!