ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಯೆಮೆನ್ ದೇಶದ ಜೈಲಿನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಇರುವಂತೆ ವಿದೇಶಿ ಜೈಲುಗಳಲ್ಲಿ ಸಾವಿರಾರು ಭಾರತೀಯರು ಇನ್ನೂ ಕೊಳೆಯುತ್ತಿದ್ದಾರೆ.
ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಹಿತಿಯ ಪ್ರಕಾರ, 2025ರ ಮಾರ್ಚ್ ವೇಳೆಗೆ 10,152 ಮಂದಿ ಭಾರತೀಯರು ವಿದೇಶದ ಜೈಲಿನಲ್ಲಿದ್ದಾರೆ. ಕೆಲವರು ವಿಚಾರಣಾಧೀನ ಕೈದಿಯಾಗಿದ್ದರೆ, ಇನ್ನೂ ಹಲವರು ಹಲವು ಕೇಸ್ಗಳಲ್ಲಿ ಅಪರಾಧಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಸೌದಿ ಅರೇಬಿಯಾದ ಜೈಲುಗಳಲ್ಲಿ 2633 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಯುಎಇಯಲ್ಲಿ 2518 ಮಂದಿ ಭಾರತೀಯರು ಜೈಲಿನಲ್ಲಿದ್ದಾರೆ.
ಅದೇ ರೀತಿಭಾರತದ ಪಕ್ಕದ ರಾಷ್ಟ್ರ ನೇಪಾಳದ ಜೈಲಿನಲ್ಲೂ ಭಾರತೀಯರಿದ್ದಾರೆ. 1122 ಮಂದಿ ಭಾರತೀಯರು ಅಲ್ಲಿನ ಜೈಲಿನಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಕತಾರ್ ದೇಶದಲ್ಲಿ 937 ಮಂದಿ ಭಾರತೀಯರು ಜೈಲಿನಲ್ಲಿದ್ದಾರೆ.
ಕುವೈತ್ ರಾಷ್ಟ್ರದ ಜೈಲಿನಲ್ಲಿ 611 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದರೆ , ಮಲೇಷ್ಯಾದ ಜೈಲುಗಳಲ್ಲಿ 387 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ.
ಇಂಗ್ಲೆಂಡ್ ದೇಶದ ಜೈಲುಗಳಲ್ಲಿ 338 ಮಂದಿ ಭಾರತೀಯರು ಶಿಕ್ಷೆ ಎದುರಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ 286 ಮಂದಿ ಭಾರತೀಯರು ಈಗಲೂ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇನ್ನು ಬಹರೇನ್ದೇಶದ ಜೈಲುಗಳಲ್ಲಿ 181 ಮಂದಿ , ಚೀನಾದಲ್ಲಿ 173 ಮಂದಿ ಭಾರತೀಯರು ಶಿಕ್ಷೆ ಎದುರಿಸುತ್ತಿದ್ದಾರೆ.
ಉಳಿದಂತೆ ಜಗತ್ತಿನ ಇತರ ದೇಶಗಳ ಜೈಲಿನಲ್ಲಿ 1440 ಮಂದಿ ಭಾರತೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ.