ಭಾರತ ಎಷ್ಟು ಜೆಟ್ ಗಳನ್ನು ಕಳೆದುಕೊಂಡಿದೆ? ಸತ್ಯ ಬಹಿರಂಗಪಡಿಸಿ: ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಭಾರತ ಎಷ್ಟು ಜೆಟ್ ಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಆಪರೇಷನ್ ಸಿಂದೂರನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಧ್ವಂಸಗೊಂಡಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿಕೆ ಬಳಿಕ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಜನರಲ್ ಚೌಹಾಣ್ ಅವರು ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ಕಾಂಗ್ರೆಸ್ ನಾಯಕ ಉತ್ತಮ್ ಕುಮಾರ್ ರೆಡ್ಡಿ, ಸಂಘರ್ಷದ ಸಮಯದಲ್ಲಿ, ವಿಶೇಷವಾಗಿ ಸಿಡಿಎಸ್ ಪ್ರವೇಶದ ನಂತರ ಭಾರತದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ದೇಶವು ತಿಳಿದುಕೊಳ್ಳಲು ಬಯಸಿದೆ ಎಂದಿದ್ದಾರೆ.

ಒಂದು ಸರ್ಕಾರ ಪಾರದರ್ಶಕವಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ಹೊಣೆಗಾರಿಕೆ ಸಾಮಾನ್ಯ. ಇದು ದೇಶಭಕ್ತಿಯ ಬಗ್ಗೆ ಅಲ್ಲ. ನಾವು ಅವರಿಗಿಂತ ಹೆಚ್ಚು ದೇಶಭಕ್ತರು. ಗಾಂಧಿ ಕುಟುಂಬ, ಸ್ವತಃ ದೇಶದ ಸಮಗ್ರತೆಗಾಗಿ ಭಾರಿ ತ್ಯಾಗಗಳನ್ನು ಮಾಡಿದೆ. ಆದರೂ ಈ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಇದು ನಿಜವಾಗಿಯೂ ಆಘಾತಕಾರಿ, ವಿಚಿತ್ರ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!