ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್ನಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದ್ದಾರೆ.
ಕದನ ವಿರಾಮ ಘೋಷಣೆಯಾಗಿ ಒಂದು ದಿನದ ಬಳಿಕ ಭಾರತದ ವಿವಿಧ ಪಡೆಗಳ ಮಹಾನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಸಿಂದೂರ್ ಹಾಗು ನಂತರದ ಭಾರತದ ರಣತಂತ್ರಗಳ ಕೆಲ ವಿವರಗಳನ್ನು ನೀಡಿದ್ದಾರೆ.
ಆಪರೇಷನ್ ಸಿಂದೂರ್ನಲ್ಲಿ ಹಲವು ಉಗ್ರರನ್ನು ಕೊಲ್ಲಲಾಗಿದೆ. ಲಷ್ಕರೆ ತೈಯಬಾದ ಮುದಾಸಿರ್, ಜೈಷೆ ಸಂಘಟನೆಯ ಉಗ್ರ ಹಫೀಜ್ ಮೊಹಮ್ಮದ್, ಬಹಾವಲ್ಪುರದ ಮರ್ಕಜ್ ಸಭಾನಲ್ಲಾದ ಉಸ್ತುವಾರಿ ಜಮೀಲ್, ಲಷ್ಕರೆ ತೈಬಾ ಉಗ್ರ ಖಾಲಿದ್ ಮೊದಲಾದವರು ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಸಂಗತಿಯನ್ನು ಡಿಜಿಎಂಒ ನೀಡಿದ್ದಾರೆ.
ಮೇ 8 ಮತ್ತು ಮೇ 9 ರಂದು ಪಾಕಿಸ್ತಾನದ ಕಡೆಯಿಂದ ದಾಳಿಗೆ ಯತ್ನ ನಡೆದಿದೆ. ಇದನ್ನು ಭಾರತ ಯಶಸ್ವಿಯಾಗಿ ವಿಫಲಗೊಳಿಸಿದೆ. ಭಾರತದ ವಾಯುನೆಲೆಗಳ ಮೇಲೆ ಪಾಕಿಸ್ತಾನದ ದಾಳಿ ವಿಫಲವಾಗಿದೆ. ನಾಗರಿಕರನ್ನು ಗುರಿಯಾಗಿಸಿ ಪಾಕ್ ದಾಳಿ ನಡೆಸಿದೆ. ಆದರೆ ಭಾರತ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಹೇಳಿದರು.
ಇದುವರೆಗೆ ಪಾಕಿಸ್ತಾನ 700 ಡ್ರೋನ್‌ಗಳನ್ನು ಹೊಡೆದುರಯುಳಿಸಿದ್ದೇವೆ. ಪಾಕಿಸ್ತಾನದ ಸುಮಾರು 35-40 ಸೈನಿಕರು ಮೃತಪಟ್ಟಿದ್ದಾರೆ. ಭಾರತದ ದಾಳಿಯಿಂದ ಪಾಕ್‌ನ 1 ವಿಮಾನಕ್ಕೂ ಹಾನಿಯಾಗಿಲ್ಲ, ಯಾವ ನಾಗರಿಕನೂ ಗಾಯಗೊಂಡಿಲ್ಲ. ಪಾಕ್‌ನ ರಾಡಾರ್ ಕೇಂದ್ರ, ಏರ್‌ಬೇಸ್ ಧ್ವಂಸಗೊಳಿಸಲಾಗಿದೆʼʼ ಎಂದು ಹೇಳಿದರು. ಜತೆಗೆ ನಾಶವಾದ ಉಗ್ರರ ನೆಲೆಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ವಾಯುಪಡೆ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ಏರ್ ಮಾರ್ಷಲ್ ಎ.ಕೆ. ಭಾರ್ತಿ, ನೌಕಾಪಡೆ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ವೈಸ್ ಅಡ್ಮಿರಲ್ ಪ್ರಮೋದ್ ಅವರೂ ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು, ಕಾರ್ಯಾಚರಣೆಗಳ ವಿವರ ನೀಡಿದ್ದಾರೆ.