ವಿಮಾನದಲ್ಲಿರೋ Black Box ಬಗ್ಗೆ ನಿಮಗೆಷ್ಟು ಗೊತ್ತು? ಈ ಸಣ್ಣ ಪೆಟ್ಟಿಗೆಯಿಂದ ಏನೆಲ್ಲಾ ವಿಷಯ ತಿಳ್ಕೊಬಹುದು ?

ವಿಮಾನಗಳು ನಮ್ಮ ಜೀವನದ ವೇಗವನ್ನೇ ಬದಲಾಯಿಸಿಬಿಟ್ಟಿವೆ. ಭೂಮಿಯ ಯಾವುದೇ ಮೂಲೆಯಿಂದ ಇನ್ನೊಂದು ಕಡೆಗೆ ಕೆಲವೇ ಗಂಟೆಗಳಲ್ಲಿ ತಲುಪುವ ಅವಕಾಶವನ್ನು ವಿಮಾನಗಳು ಒದಗಿಸಿವೆ. ಇದು ಕೇವಲ ಪ್ರಯಾಣ ಮಾತ್ರವಲ್ಲ, ತಂತ್ರಜ್ಞಾನ, ವಿಜ್ಞಾನ ಮತ್ತು ಮಾನವ ಕನಸುಗಳ ಸಾರ್ಥಕತೆ ಎಂಬುದರ ಉದಾಹರಣೆ ಕೂಡ ಆಗಿದೆ.

ಇಂತಹ ವಿಮಾನಗಳು ಭದ್ರತೆಗಾಗಿ ಹಲವು ತಂತ್ರಜ್ಞಾನಗಳನ್ನು ಬಳಸುತ್ತವೆ. ಅದರಲ್ಲಿ ಬಹುಮುಖ್ಯವಾದದ್ದು “ಬ್ಲಾಕ್ ಬಾಕ್ಸ್” ಎಂಬ ಸಾಧನ. ಇದು ವಿಮಾನ ಅಪಘಾತವಾದಾಗ, ಅದರ ಕಾರಣವನ್ನು ತಿಳಿಯಲು ನೆರವಾಗುವ ಪ್ರಮುಖ ಅಸ್ತ್ರ ಅಂತಾನೆ ಹೇಳಬಹುದು.

Orange is the new black: the history of the 'black box' - Aviation24.be

ಬ್ಲಾಕ್ ಬಾಕ್ಸ್ ಎಂದರೇನು?
ಬ್ಲಾಕ್ ಬಾಕ್ಸ್ ಅನ್ನೋದು ವಿಮಾನದಲ್ಲಿ ಜೋಡಿಸಲಾಗುವ ಅತ್ಯಂತ ಶಕ್ತಿಯುತವಾದ ಒಂದು ಸಾಧನ. ಇದು ವಿಮಾನ ಹಾರಾಟದ ಎಲ್ಲ ಮಾಹಿತಿಯನ್ನು ಹಾಗೂ ಪೈಲಟ್‌ಗಳ ನಡುವಿನ ಮಾತುಕತೆಯನ್ನು ರೆಕಾರ್ಡ್ ಮಾಡುತ್ತೆ. ಸಾಮಾನ್ಯವಾಗಿ ಈ ಬಾಕ್ಸ್ ಕೆಂಪು ಬಣ್ಣದಲ್ಲಿರುತ್ತದೆ ಆದರೆ “ಬ್ಲಾಕ್ ಬಾಕ್ಸ್” ಎನ್ನೋದು ಇದರ ಹೆಸರಷ್ಟೇ.

ಇದರ ಮುಖ್ಯ ಕೆಲಸ ಏನು?

ಫ್ಲೈಟ್ ಡೇಟಾ ರೆಕಾರ್ಡರ್ (FDR):
ವಿಮಾನದ ಎತ್ತರ, ವೇಗ, ಇಂಧನದ ಮಟ್ಟ, ಎಂಜಿನ್ ಸ್ಥಿತಿ ಮುಂತಾದ ತಾಂತ್ರಿಕ ಮಾಹಿತಿಗಳನ್ನು ಸೆರೆಹಿಡಿದು ಸಂಗ್ರಹಿಸುತ್ತದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR):
ಪೈಲಟ್ ಹಾಗೂ ಸಹಾಯಕ ಪೈಲಟ್‌ಗಳ ನಡುವಿನ ಮಾತುಕತೆ, ಎರ್ ಟ್ರಾಫಿಕ್ ನಿಯಂತ್ರಕರ ಜೊತೆಗಿನ ಸಂಭಾಷಣೆ ಮತ್ತು ಕಾಕ್‌ಪಿಟ್‌ನೊಳಗಿನ ಶಬ್ದಗಳನ್ನು ದಾಖಲಿಸಿಕೊಳ್ಳುತ್ತೆ.

ಅವಘಡದ ನಂತರ ಉಪಯೋಗ:
ವಿಮಾನ ಅಪಘಾತದ ನಂತರ, ಬ್ಲಾಕ್ ಬಾಕ್ಸ್ ಅನ್ನು ಪತ್ತೆಹಚ್ಚಿ ಅದರಲ್ಲಿ ಸಂಗ್ರಹಿತ ಡೇಟಾವನ್ನು ವಿಶ್ಲೇಷಿಸುತ್ತಾರೆ. ಇದರಿಂದಾಗಿ ವಿಮಾನ ಎಲ್ಲಿ ಮತ್ತು ಏಕೆ ಪತನವಾಯಿತೆಂಬುದು ತಿಳಿದುಬರುತ್ತದೆ.

ರಕ್ಷಿತ ವಿನ್ಯಾಸ: ಬ್ಲಾಕ್ ಬಾಕ್ಸ್ ಉಷ್ಣತೆ, ಪ್ರಭಾವ, ನೀರು ಮತ್ತು ಒತ್ತಡವನ್ನು ತಡೆಯುವ ಶಕ್ತಿಯುತ ಲೋಹದಿಂದ ರಚಿಸಲಾಗಿದೆ. ಇದು 1100 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ತಾಳಬಲ್ಲದು.

ಬ್ಲಾಕ್ ಬಾಕ್ಸ್ ವಿಮಾನ ದುರಂತಗಳ ಹಿಂದಿನ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಇದು ತಾಂತ್ರಿಕ ಮಾಹಿತಿ ಮತ್ತು ಆಡಿಯೋಗಳೊಂದಿಗೆ ನೆರವಾಗುತ್ತದೆ. ಇದು ವಿಮಾನ ಪ್ರಯಾಣದ ಭದ್ರತೆಗೆ ಬಹುಮುಖ್ಯವಾಗಿರುವ ಆಧಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!