ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಬರ್ ಚಾಲಕರನ್ನು ನೋಡಿ ಪಾಪ ಮಳೆ, ಬಿಸಿಲು, ಚಳಿ ಲೆಕ್ಕಿಸದೇ ಹೇಗೆ ಕೆಲಸ ಮಾಡ್ತಾರಲ್ಲ, ಸ್ವಲ್ಪ ಸಂಬಳಕ್ಕೆ ಎಷ್ಟೊಂದು ಕಷ್ಟ ಪಡ್ತಾರೆ ಎಂದುಕೊಂಡಿದ್ರಾ? ಊಬರ್ ಬೈಕ್ ಚಾಲಕರಿಗೆ ಸಂಬಳ ಎಷ್ಟು ಗೊತ್ತಾ?
ಇಲ್ಲಿ ಕಾಣೋ ಊಬರ್ ಓಡಿಸೋ ಯುವಕ ಪ್ರತಿ ತಿಂಗಳಿಗೆ 80,000ರೂ. ದುಡಿತಿದ್ದಾನೆ. ಹೌದು, ಎಷ್ಟೋ ಮಂದಿ ಕಾರ್‌ನಲ್ಲಿ ಓಡಾಡೋರಿಗೂ ಇಷ್ಟು ಸಂಬಳ ಇರೋದಿಲ್ಲ. ಇದು ಎಲ್ಲ ಊಬರ್ ಚಾಲಕರ ಮಾತಲ್ಲ, ಅವರು ದಿನಕ್ಕೆ ಎಷ್ಟು ಬೈಕ್ ಓಡಿಸ್ತಾರೆ ಎನ್ನುವುದರ ಮೇಲೆ ಡಿಪೆಂಡ್ ಆಗುತ್ತದೆ.
ಬೆಂಗಳೂರು ಮೂಲದ ಉಬರ್ ಬೈಕ್ ಚಾಲಕನೊಬ್ಬ ತಾನು ತಿಂಗಳಿಗೆ 80,000 ರೂ. ಗಳಿಸುವುದಾಗಿ ಹೇಳಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈತನ ತಿಂಗಳ ಸಂಬಳ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕರ್ನಾಟಕ ಪೋರ್ಟ್‌ಫೋಲಿಯೊ (@karnatakaportf) ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಉಬರ್ ಬೈಕ್ ಚಾಲಕ ಹಿಂದಿಯಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ನಾನು ದಿನಕ್ಕೆ 13 ಗಂಟೆಗಳ ಕಾಲ ಕೆಲಸ ಮಾಡಿ, ತಿಂಗಳಿಗೆ ಸುಮಾರು 80,000 ರೂ. ಗಳಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾನೆ. ಇದಲ್ಲದೆ “ನನಗೆ ಯಾವುದೇ ಯಾರಿಂದಲೂ ಒತ್ತಡವಿಲ್ಲ, ನನಗೆ ಯಾರು ಹೇಳೋರು ಇಲ್ಲ, ಇಲ್ಲಿ ನನಗೆ ನಾನೇ ಮಾಲೀಕ” ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.