ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಮ ವರ್ಗದವರು ಈ ಬಜೆಟ್‌ನಿಂದ ನಿರೀಕ್ಷೆ ಮಾಡಿದ್ದ ವಿಷಯ ಅಂತೂ ನಿಜವಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಜವಾಗಿಸಿದ್ದಾರೆ. 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವನ್ನು ಅವರು 2025ರ ಬಜೆಟ್ನಲ್ಲಿ ಒದಗಿಸಿಕೊಟ್ಟಿದ್ದಾರೆ.
ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ ಹೊಸ ಕಾನೂನು ರೂಪಿಸುವ ಘೋಷಣೆಯನ್ನೂ ಮಾಡಿದ್ದಾರೆ. ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೀಗ 12 ಲಕ್ಷ ರೂಪಾಯಿ ವರೆಗಿನ ಆದಾಯವನ್ನು ಈಗ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಈಗ ನಿಮ್ಮ ಸಂಬಳ ಎಷ್ಟಿದ್ದರೆ ಎಷ್ಟು ಟ್ಯಾಕ್ಸ್ ಕಟ್ಟಬೇಕು? ಈ ಹಿಂದೆ ಎಷ್ಟು ಕಟ್ಟುತ್ತಿದ್ದಿರಿ, ಈಗ ಎಷ್ಟು ಕಟ್ಟಬೇಕು? ನಿಮಗೆ ಎಷ್ಟು ಲಾಭ ಆಗಿದೆ? ಈ ಎಲ್ಲ ಡೀಟೇಲ್ಸ್ ಇಲ್ಲಿದೆ ನೋಡಿ..
ನಿಮ್ಮ ಸಂಬಳ ಹತ್ತು ಲಕ್ಷ ರೂಪಾಯಿ ಇದ್ದರೆ ಈ ಹಿಂದೆ ಅದಕ್ಕೆ ಐವತ್ತು ಸಾವಿರ ರೂಪಾಯಿ ಟ್ಯಾಕ್ಸ್ ಇತ್ತು. ಆದರೆ ಈಗ ಆ ಟ್ಯಾಕ್ಸ್ ಮೊತ್ತ ಸೊನ್ನೆಯಾಗಿದೆ. ಹೀಗಾಗಿ ನೀವು ಐವತ್ತು ಸಾವಿರ ಉಳಿಸಿದಂತೆ ಆಗುತ್ತದೆ. ಇದೇ ರೀತಿ ಯಾವ್ಯಾವ ಮೊತ್ತಕ್ಕೆ ಎಷ್ಟು ಟ್ಯಾಕ್ಸ್ ಇತ್ತು ಎಂದು ಇಲ್ಲಿ ವಿವರಿಸಲಾಗಿದೆ.
10 ಲಕ್ಷ ರೂ. | 50,000 ರೂ. | 0 | 50,000 ರೂ. |
12 ಲಕ್ಷ ರೂ. | 80,000 ರೂ. | 0 | 80,000 ರೂ. |
15 ಲಕ್ಷ ರೂ. | 1.40 ಲಕ್ಷ ರೂ. | 45,000 ರೂ. | 95,000 ರೂ. |
20 ಲಕ್ಷ ರೂ. | 2.90 ಲಕ್ಷ ರೂ. | 1.40 ಲಕ್ಷ ರೂ. | 1.50 ಲಕ್ಷ ರೂ. |
24 ಲಕ್ಷ ರೂ. | 4.10 ಲಕ್ಷ ರೂ. | 2.40 ಲಕ್ಷ ರೂ. | 1.70 ಲಕ್ಷ ರೂ. |
30 ಲಕ್ಷ ರೂ. | 5.90 ಲಕ್ಷ ರೂ. | 4.20 ಲಕ್ಷ ರೂ. | 1.70 ಲಕ್ಷ ರೂ. |
50 ಲಕ್ಷ ರೂ. | 11.90 ಲಕ್ಷ ರೂ. | 10.20 ಲಕ್ಷ ರೂ. | 1.70 ಲಕ್ಷ ರೂ. |