IPL 2025ರಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ? ಗೊತ್ತಾದ್ರೆ ಶಾಕ್ ಆಗ್ತೀರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿ ಬಿಸಿಸಿಐಗೆ ದಾಖಲೆಯ ಆದಾಯವನ್ನು ಒದಗಿಸಿದೆ. ಬಿಸಿಸಿಐ ಸುಮಾರು 12,000 ಕೋಟಿ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಕ್ರಿಕೆಟ್ ಮಾತ್ರವಲ್ಲದೆ, ಆರ್ಥಿಕತೆಯಲ್ಲೂ ಭಾರತ ಪ್ರಬಲ ಸ್ಥಾನವನ್ನು ಹೊಂದಿರುವುದನ್ನು ತೋರಿಸುತ್ತದೆ.

ಈ ಲಾಭದಲ್ಲಿ ಮಾಧ್ಯಮ ಹಕ್ಕುಗಳು ಪ್ರಮುಖ ಪಾತ್ರವಹಿಸಿವೆ. ಡಿಸ್ನಿ ಸ್ಟಾರ್ ಹಾಗೂ ವಯಾಕಾಮ್ 18 ಕಂಪನಿಗಳು 2023-27 ಅವಧಿಗೆ 48,390 ಕೋಟಿಗೆ ಹಕ್ಕುಗಳನ್ನು ಖರೀದಿಸಿವೆ. ಪ್ರತಿ ಋತುವಿಗೆ ಶೇ.75ರಷ್ಟು ಆದಾಯ ಇದರಿಂದಲೇ ಬರುತ್ತಿದೆ.

ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕರಾಗಿ 2,500 ಕೋಟಿ ನೀಡಿದ್ದು, ವಾರ್ಷಿಕ 500 ಕೋಟಿ ಲಾಭವನ್ನು ನೀಡುತ್ತಿದೆ. ಇತರ ಪ್ರಾಯೋಜಕರು ಮತ್ತು ಫ್ರಾಂಚೈಸಿಗಳಿಂದ 2,200 ಕೋಟಿಗೂ ಹೆಚ್ಚು ಶುಲ್ಕ ಬಂದಿದೆ. ಟಿಕೆಟ್ ಮಾರಾಟ ಹಾಗೂ ಪಂದ್ಯ ದಿನದ ಇತರ ಆದಾಯಗಳಿಂದ 500 ಕೋಟಿ ಲಾಭ ಬಿಸಿಸಿಐ ಲೆಕ್ಕಕ್ಕೆ ಸೇರುತ್ತದೆ.

2024ರ ಹಣಕಾಸು ವರ್ಷದಲ್ಲಿ ಬಿಸಿಸಿಐ 20,686 ಕೋಟಿ ಆದಾಯ ದಾಖಲಿಸಿದ್ದು, 2023ರ 16,493 ಕೋಟಿಗಿಂತ ತುಂಬಾ ಹೆಚ್ಚಾಗಿದೆ. ಐಪಿಎಲ್ ಇದೀಗ ಕ್ರೀಡಾ ಪ್ರಪಂಚದ ಸಾಂಸ್ಕೃತಿಕ ಚಟುವಟಿಕೆಗೆ ಮೀರಿ, ಭಾರತದ ಆರ್ಥಿಕ ಶಕ್ತಿಯ ಸಂಕೇತವಾಗಿ ಬೆಳೆಯುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!