ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚ ಯೋಜನೆಯಲ್ಲಿ ನಾಲ್ಕನೇ ಗ್ಯಾರೆಂಟಿಯಾದ ಯುವನಿಧಿಗೆ ಜನವರಿ 12ರಂದು ಶಿವಮೊಗ್ಗದಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ.
ಯುವನಿಧಿಗೆ ಯಾರೆಲ್ಲಾ ಅರ್ಹರು? ಅರ್ಜಿ ಹಾಕೋದು ಹೇಗೆ? ಇಲ್ಲಿದೆ ಮಾಹಿತಿ..
- ಡಿಗ್ರಿ ಪದವಿ ಇದ್ದು ನಿರುದ್ಯೋಗಿಗಳಾಗಿರುವವರಿಗೆ ಯುವನಿಧಿ ಹಣ ಸೇರುತ್ತದೆ
- ಮಧ್ಯದಲ್ಲಿ ಕೆಲಸ ಸಿಕ್ಕರೆ ಯುವನಿಧಿ ಹಣ ನೀಡಲಾಗುವುದಿಲ್ಲ
- ಕೆಲಸದಲ್ಲಿದ್ದು ಹಣ ಪಡೆಯುವುದು ತಿಳಿದರೆ, ಪಡೆದಷ್ಟು ಹಣ ವಾಪಾಸ್ ಮಾಡಬೇಕು, ಜೊತೆಗೆ ಕಾನೂನು ಕ್ರಮ ಅನುಭವಿಸಬೇಕು
- ಈ ಯೋಜನೆಗೆ ಒಟ್ಟು 250 ಕೋಟಿ ರೂ ಹಣ ನಿಗದಿ
- ಪ್ರತಿ ತಿಂಗಳು 25ರ ಒಳಗೆ ಅರ್ಜಿ ಸಲ್ಲಿಕೆಗೆ ಅವಕಾಶ
- ಕರ್ನಾಟಕ ಒನ್, ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
- ಡಿಪ್ಲೊಮೊ ಓದಿದ್ದವರು 9ನೇ ಕ್ಲಾಸ್‌ನಿಂದ ಕರ್ನಾಟಕದಲ್ಲಿ ಓದಿರಬೇಕು.
- ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಡಿಗ್ರಿ ಕರ್ನಾಟಕದಲ್ಲೇ ಮಾಡಿರಬೇಕು