ಮಕ್ಕಳಿಗೆ ಹಲ್ಲು ಬರಲು ಆರಂಭವಾದ ತಕ್ಷಣದಿಂದಲೇ ಬ್ರಶ್ ಮಾಡಿಸಬೇಕು, ಮಕ್ಕಳಿಗಾಗಿ ಮೃದುವಾದ ಸಿಲಿಕಾನ್ ಬ್ರಶ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮಕ್ಕಳು ಒಂದು ವರ್ಷ ದಾಟಿದ ನಂತರ ಟೂತ್‌ಪೇಸ್ಟ್ ಬಳಕೆ ಮಾಡಬಹುದು.
ಸಾಮಾನ್ಯವಾಗಿ ದೊಡ್ಡವರು ಬಳಸುವ ಪೇಸ್ಟ್‌ನಲ್ಲಿ 1000-1500 ಪಿಪಿಎಮ್‌ನಷ್ಟು ಫ್ಲೋರೀಡ್ ಇರುತ್ತದೆ. ಮಕ್ಕಳು ಟೂತ್‌ಪೇಸ್ಟ್ ನುಂಗುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ 1000 ಪಿಪಿಎಂಗಿಂತ ಕಡಿಮೆ ಫ್ಲೋರೈಡ್ ಇರುವ ಪೇಸ್ಟ್‌ನ್ನು ಮಕ್ಕಳಿಗಾಗಿ ಆರಿಸಿ. ಇನ್ನು ಮಕ್ಕಳಿಗೆಂದೇ ಫ್ಲೋರೈಡ್ ಇಲ್ಲದ ಟೂತ್‌ಪೇಸ್ಟ್ ಕೂಡ ಸಿಗುತ್ತದೆ ಅದನ್ನು ಬಳಕೆ ಮಾಡಿ