ಇತ್ತೀಚೆಗೆ ಅಡುಗೆ ಮನೆಯಲ್ಲಿ ಅಲ್ಯೂಮಿನಿಯಂ, ನಾನ್‌ಸ್ಟಿಕ್ ಪಾತ್ರೆಗಳ ಜಾಗದಲ್ಲಿ ಕಾಸ್ಟ್ ಐರನ್ ತವಾಗಳ ಬಳಕೆ ಹೆಚ್ಚಾಗಿದೆ. ದೋಸೆ, ಚಪಾತಿ, ಪರೋಟಾ ತಯಾರಿಯಲ್ಲಿ ಈ ತವಾಗಳು ಹೆಚ್ಚು ಬಳಸಲ್ಪಡುತ್ತಿವೆ. ಆದರೆ ಇವು ಸರಿಯಾಗಿ ನಿರ್ವಹಣೆ ಆಗದೆ ಇದ್ದರೆ ಬೇಗನೆ ತುಕ್ಕು ಹಿಡಿಯುತ್ತವೆ ಮತ್ತು ಹಾಳಾಗುತ್ತವೆ. ಈ ತವಾವನ್ನು ವರ್ಷಗಳ ಕಾಲ ತುಕ್ಕು ಹಿಡಿಯದಂತೆ ಇಟ್ಕೋಳೋದು ತುಂಬಾ ಸುಲಭ.
ಬಳಕೆ ನಂತರ ಕಾಸ್ಟ್ ಐರನ್ ತವಾ ಶುದ್ಧತೆ ಹೀಗೆ ಇರಲಿ:
ದೋಸೆ ಮಾಡಿದ ತಕ್ಷಣ ತವೆಯನ್ನು ತಣ್ಣಗಾಗಲು ಬಿಡಿ. ಬಿಸಿ ತವೆಗೆ ತಕ್ಷಣ ತಣ್ಣೀರು ಹಾಕುವುದು ತಪ್ಪು. ಇದರಿಂದ ತವಾದಲ್ಲಿ ಬಿರುಕು ಬೀಳುವ ಸಾಧ್ಯತೆ ಇರುತ್ತದೆ. ತಣ್ಣಗಾದ ತವಾವನ್ನು ಮೃದು ಸ್ಪಾಂಜ್ ಅಥವಾ ಬ್ರಷ್‌ನಿಂದ ಉಜ್ಜಿ ತೊಳೆಯಬೇಕು. ಈ ವೇಳೆ ಸಾಬೂನನ್ನು ಬಳಸದಿರಿ. ಸೀಸನಿಂಗ್ ಹಾಳಾಗಬಹುದು. ಆಹಾರ ಅಂಟಿಕೊಂಡಿದರೆ ಉಪ್ಪು ಹಾಕಿ ಉಜ್ಜಬಹುದು. ಬಳಿಕ ಒಣ ಬಟ್ಟೆಯಿಂದ ಒರೆಸಿ, ತವಾ ಒಣಗಿದ ಮೇಲೆ ಎಣ್ಣೆ ಹಚ್ಚಿ ಇರಿಸಿ.
ತುಕ್ಕು ಹಿಡಿದರೆ ಹೀಗೆ ಮಾಡಿ
ಒಮ್ಮೆ ತವಾಗೆ ತುಕ್ಕು ಹಿಡಿದು ಬಿಟ್ಟರೆ ಸ್ವಲ್ಪ ನೀರು ಹಾಕಿ ಸ್ಟೀಲ್ ವೂಲ್ ಅಥವಾ ಐರನ್ ವೂಲ್‌ನಿಂದ ಚೆನ್ನಾಗಿ ಉಜ್ಜಿ. ನಂತರ ತವಾವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟು ನಂತರ ಒಣಗಿಸಿ. ಕೊನೆಗೆ ಎಣ್ಣೆ ಹಚ್ಚಿ 350°F (175°C) ತಾಪಮಾನದಲ್ಲಿ ಒಂದು ತಾಸು ಓವನ್‌ನಲ್ಲಿ ಇಡಬಹುದು ಅಥವಾ ಗ್ಯಾಸ್ ಮೇಲೆ ಬಿಸಿ ಮಾಡಬಹುದು. ಇದರಿಂದ ಮತ್ತೆ ಹೊಸದಂತೆ ಸೀಸನಿಂಗ್ ಆಗುತ್ತದೆ.
ಮೊದಲ ಬಾರಿಗೆ ತವಾವನ್ನು ಬಳಸುತ್ತಿದ್ದೀರಾ?
ಮೊದಲಬಾರಿಗೆ ಸರಿಯಾಗಿ ಸೀಸನಿಂಗ್ ಮಾಡುವುದು ಅತ್ಯಗತ್ಯ. ಎರಡು ಮೂರು ಬಾರಿ ಈರುಳ್ಳಿ ಹಾಗೂ ಉಪ್ಪಿನಿಂದ ತವಾವನ್ನು ಉಜ್ಜಿ, ಎಣ್ಣೆ ಹಚ್ಚಿ ಬಿಸಿ ಮಾಡಿ. ಇದರಿಂದ ತವಾಗೆ ನೈಸರ್ಗಿಕ ನಾನ್‌ಸ್ಟಿಕ್ ಲೇಯರ್ ಉಂಟಾಗುತ್ತದೆ.
ಕಾಸ್ಟ್ ಐರನ್ ತವಾಗೆ ಹೆಚ್ಚು ಬೆಲೆಯೂ ಇರದು, ಆದರೆ ಸರಿಯಾಗಿ ಕಾಪಾಡಿದರೆ ಅದಕ್ಕಿಂತ ಅಮೂಲ್ಯವಾದದ್ದು ಇನ್ನೊಂದು ಇಲ್ಲ. ನಿಮ್ಮ ಅಡುಗೆಗೆ ಉತ್ತಮ ರುಚಿ ಮತ್ತು ಆರೋಗ್ಯ ನೀಡುವ ಈ ತವಾವನ್ನು ಶ್ರದ್ಧೆಯಿಂದ ನಿರ್ವಹಿಸಿ, ವರ್ಷಗಳ ಕಾಲ ಉಪಯೋಗಿಸಿ!
Rapists to be jailed as bed comfort for all inmates 24X7, the actoon/acts on him by all to be televised for display with only his face visible as a deterance?