ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸೋದೆ ದೊಡ್ಡ ಸಮಸ್ಯೆ. ಒದ್ದೆ ಬಟ್ಟೆಯನ್ನು ಒಣಗಿಸದಿದ್ದರೆ ಅನೇಕ ರೀತಿಯ ತೊಂದರೆಗಳು ಎದುರಾಗುತ್ತವೆ. ಏಕೆಂದರೆ ಬಟ್ಟೆ ಕೊಂಚ ಒದ್ದೆ ಇದ್ದರೂ ಸಹ ಕೊಳಕು ವಾಸನೆ ಬೀರುತ್ತದೆ.
ಹೀಗೆ ಬಟ್ಟೆಗಳಿಂದ ವಾಸನೆ ಬರಲು ಶುರುವಾದರೆ ಅದನ್ನು ತಡೆಯೋದು ಕಷ್ಟಸಾಧ್ಯ ಇದರಿಂದ. ಚರ್ಮದ ಸೋಂಕು ಸಹ ಶುರುವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ನಿಮ್ಮ ಬಟ್ಟೆ ಕೆಟ್ಟ ವಾಸನೆ ಬರದಿರಲು ಈ ಸಲಹೆಗಳನ್ನು ಪಾಲಿಸಿ.
ಮಳೆಗಾಲದಲ್ಲಿಯೂ ನಿಮ್ಮ ಬಟ್ಟೆಗಳನ್ನು ಸಂಪೂರ್ಣವಾಗಿ ತಾಜಾ ಮತ್ತು ಸೋಂಕು ಮುಕ್ತವಾಗಿಡಲು ಬಟ್ಟೆ ಒಗೆಯುವಾಗ, ನೀರಿನಲ್ಲಿ ಸ್ವಲ್ಪ ವಿನೆಗರ್ ಅಥವಾ ಅಡಿಗೆ ಸೋಡಾದೊಂದಿಗೆ ಲಾಂಡ್ರಿ ಪುಡಿಯನ್ನು ಮಿಶ್ರಣ ಮಾಡಿ. ಇದರಿಂದ ಮಳೆಯಿಂದ ಉಂಟಾಗುವ ದುರ್ವಾಸನೆ ತಡೆಯಬಹುದು.
ದುರ್ವಾಸನೆ ಹೋಗಲಾಡಿಸಲು ಬಟ್ಟೆ ಒಗೆಯುವಾಗ ನಿಂಬೆರಸ ಮತ್ತು ಸ್ವಲ್ಪ ನೀರು ಹಾಕಿ. ಇದು ವಾಸನೆಯನ್ನು ತೆಗೆದುಹಾಕುತ್ತದೆ. ಮಳೆಗಾಲದಲ್ಲಿ ಬಟ್ಟೆಗಳನ್ನು ಒಟ್ಟಿಗೆ ಇಡಬೇಡಿ. ಇದರಿಂದ ಬಟ್ಟೆ ಕೆಟ್ಟ ವಾಸನೆ ಬರುತ್ತದೆ. ಹಾಗಾಗಿ ನಿಮ್ಮ ಕೋಣೆಯಲ್ಲಿ ಪ್ರತ್ಯೇಕವಾಗಿ ಬಟ್ಟೆಯನ್ನು ಜೋಡಿಸುವುದು ಉತ್ತಮ.