PF Money | ಆನ್‌ಲೈನ್‌ನಲ್ಲಿ PF ಹಣವನ್ನು ಪಡೆಯುವುದು ಹೇಗೆ? ನಾವು ಹೇಳಿಕೊಡ್ತೀವಿ ನೋಡಿ!

ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ನಡೆಯುವ ಪ್ರಮುಖ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯವನ್ನು ನಿರ್ವಹಿಸಲು ರೂಪಿಸಲಾದ ಈ ಯೋಜನೆಯು, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ನಿಗದಿತ ಪ್ರಮಾಣದ ಮೊತ್ತವನ್ನು ಪಿಎಫ್ ಖಾತೆಗೆ ಮಾಸಿಕವಾಗಿ ಜಮೆ ಮಾಡುವ ವ್ಯವಸ್ಥೆಯಾಗಿದೆ. ಈ ನಿಧಿಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುತ್ತಿದೆ. ಪ್ರತಿವರ್ಷ ಬಡ್ಡಿದರ ನಿಗದಿಯಾಗುವ ಈ ನಿಧಿಯಿಂದ ಉದ್ಯೋಗಿಗಳು ನಿವೃತ್ತಿಯಾದಾಗ ಬಡ್ಡಿಯೊಂದಿಗೆ ತಮ್ಮ ಸಂಗ್ರಹಿತ ಹಣವನ್ನು ಹಿಂಪಡೆಯಬಹುದಾಗಿದೆ.

ಅದರೆ ಕೆಲವೊಮ್ಮೆ, ನಿವೃತ್ತಿಯ ಮೊದಲೇ ಅನಿವಾರ್ಯ ಅವಶ್ಯಕತೆಗಳಿಗಾಗಿ ಹಣ ಬೇಕಾದರೆ, ಆನ್‌ಲೈನ್ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ವ್ಯವಸ್ಥೆಯೂ ಇದೆ. ಹೇಗೆ ನೋಡೋಣ.

  • ಇದನ್ನು ಬಳಸಲು, ಪ್ರಥಮವಾಗಿ ನಿಮ್ಮ ಯುಎಎನ್ (UAN) ಸಕ್ರಿಯವಾಗಿರಬೇಕು ಮತ್ತು ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಯ ವಿವರಗಳು EPFO ಪೋರ್ಟಲ್‌ಗೆ ಲಿಂಕ್ ಆಗಿರಬೇಕು.
  • EPFO ಸದಸ್ಯ ಪೋರ್ಟಲ್‌ (https://unifiedportalmem.epfindia.gov.in/memberinterface/) ಗೆ ಭೇಟಿ ನೀಡಿದ ನಂತರ, ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
  • ‘ನಿರ್ವಹಣೆ’ ವಿಭಾಗದಲ್ಲಿ KYC ವಿವರಗಳು ಸರಿಯಾದವೆಯೇ ಎಂದು ಪರಿಶೀಲಿಸಿ.
  • ನಂತರ ‘ಆನ್‌ಲೈನ್ ಸೇವೆಗಳು’ ವಿಭಾಗದಲ್ಲಿ ಕ್ಲೈಮ್ ನಮೂದಿಸಿ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಮರುದಾಖಲಿಸಿ ಪರಿಶೀಲಿಸಿ.
  • ನೀವು ಯಾವ ಪ್ರಕಾರದ ಹಣ ಹಿಂಪಡೆಯಬೇಕು ಎಂಬ ಆಯ್ಕೆ ಮಾಡಬಹುದು — ಪೂರ್ಣ (ಫಾರ್ಮ್ 19), ಪಿಂಚಣಿ (10C), ಅಥವಾ ಭಾಗಶಃ (ಫಾರ್ಮ್ 31).
  • ಅನ್ವಯಿಸುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಕೊನೆಗೆ ‘ಸಲ್ಲಿಸು’ ಕ್ಲಿಕ್ ಮಾಡಿ.
  • ಪಿಎಫ್ ಹಣವು ಸಾಮಾನ್ಯವಾಗಿ 5 ರಿಂದ 20 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!