March 28, 2026
Saturday, March 28, 2026
spot_img

SAFETY | ಜನ ಹೆಚ್ಚಿರೋ ಕಡೆ ನಮ್ಮ ಗೋಲ್ಡ್‌ನ್ನು ಸೇಫ್‌ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್‌

ಇಂದು ಬೆಳಗ್ಗೆ ತಾನೇ ನಮ್ಮಲ್ಲೇ ಒಂದು ನ್ಯೂಸ್‌ ಅಪ್‌ಲೋಡ್‌ ಆಯ್ತು. ನೆಲಮಂಗಲದಲ್ಲಿ ಬೇಕರಿ ಮುಂದೆ ನಿಂತು ಮಾತಾಡ್ತಾ ಇದ್ದ ಮಹಿಳೆಯ ಮಾಂಗಲ್ಯ ಸರವನ್ನು ಅಲ್ಲೇ ಹೊಂಚು ಹಾಕಿಕೊಂಡು ನಿಂತಿದ್ದ ಕಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ. ಬರೋಬ್ಬರಿ ಐವತೈದು ಗ್ರಾಮ್‌ನ ಎರಡೆಳೆ ಮಾಂಗಲ್ಯ ಸರ ಯಾರದ್ದೋ ಪಾಲಾಯ್ತು!

ನಮ್ಮ ಬಂಗಾರವನ್ನು ನಾವು ಸೇಫ್‌ ಆಗಿ ಇಟ್ಕೊಳೋದು ಹೇಗೆ?

ಮೆಟ್ರೋ, ಬಸ್‌, ಜನನಿಬಿಡ ಪ್ರದೇಶಗಳಲ್ಲಿ ನಿತ್ಯ ಓಡಾಡ್ತೀರ ಅಂತಾದ್ರೆ ಎರಡೆಳೆ, ಒಂದೆಳೆ ಮಾಂಗಲ್ಯ ಚೈನ್‌ ತೆಗೆದು ಬೆಳ್ಳಿಯದ್ದು ಅಥವಾ ಆರ್ಟಿಫಿಶಿಯಲ್‌ ಚಿನ್ನದ ಬಣ್ಣದ ಸರ ಹಾಕಿಕೊಳ್ಳಿ. ಸರ ಕಳೆದುಹೋದ್ರೆ ಮಾಡಿಸೋಕೆ ವರ್ಷಗಳೇ ಬೇಕಾಗುತ್ತದೆ.

ಇಲ್ಲ ಮನೆಯಲ್ಲಿ ತಾಳಿ ತೆಗೆಯೋದಕ್ಕೆ ಬಿಡೋದಿಲ್ಲ ಎನ್ನುವವರು ಎಲ್ಲೇ ಹೊರಗೆ ಹೋಗುವಾಗ ಕುತ್ತಿಗೆ ಮುಚ್ಚುವ ಔಟ್‌ಫಿಟ್‌ ಧರಿಸಿ, ಸ್ಕಾರ್ಫ್‌ನ್ನು ಕುತ್ತಿಗೆಗೆ ಸುತ್ತಿಕೊಳ್ಳಿ.

ಯಾವುದೇ ಪಬ್ಲಿಕ್‌ ಪ್ಲೇಸ್‌ನಲ್ಲಿ ಇದ್ದೀರಿ ಎಂದಾದರೆ ಸುತ್ತಮುತ್ತಲಿನ ಬಗ್ಗೆ ಗಮನ ಇರಲಿ, ಅಲರ್ಟ್‌ ಆಗಿರಿ, ಪಕ್ಕದಲ್ಲೇ ಇದ್ದ ವ್ಯಕ್ತ ಕೂಡ ಕಳ್ಳ ಆಗಿರಬಹುದು.

ಆದಷ್ಟು ಚಿಕ್ಕ ಡಿಸೈನ್‌ ಹಾಗೂ ಟೈಟ್‌ ಸರಗಳನ್ನು ಧರಿಸಿ, ಉದ್ದನೆಯ ಚೈನ್‌ ಹಾಕಿದರೆ ಸಮಸ್ಯೆ ತಪ್ಪಿದ್ದಲ್ಲ. ಗಟ್ಟಿಯಾದ ಕೊಂಡಿಗಳು ಅಥವಾ ಸಿಲಿಕಾನ್‌ ರಬ್ಬರ್‌ ಬ್ಯಾಕ್‌ಗಳನ್ನು ಸರಕ್ಕೆ ಹಾಕಿ, ಬಟ್ಟೆಗೆ ಸೇಫ್ಟಿ ಪಿನ್‌ಗಳ ಜೊತೆ ಸರ ಸೇರಿಸಿ.

ಎಲ್ಲೇಹೋಗುವಾಗ ಶೋ ಆಫ್‌ ಮಾಡಬೇಡಿ. ದೂರದ ಊರುಗಳಿಗೆ ಟ್ರಾವೆಲ್‌ ಮಾಡುವಾಗ, ಟ್ರಿಪ್‌ ಹೋಗುವಾಗ ಜ್ಯುವೆಲರಿ ಕಡಿಮೆ ಹಾಕಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !