ಇನ್ನೇನು ಕೆಲವೇ ದಿನಗಳಲ್ಲಿ ಮಾವಿನ ಹಣ್ಣಿನ ಸೀಸನ್ ಮುಗಿದು ಹೋಗುತ್ತದೆ, ಮಾವಿನ ಹಣ್ಣು ಎಷ್ಟು ಬೇಕೋ ತಿಂದುಕೊಂಡು ಬಿಡೋಣ ಅನಿಸ್ತಿದ್ಯಾ? ನೀವು ತಿನ್ನುವ ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾಗಿದೆಯೋ ಅಥವಾ ಪೌಡರ್ ಹಾಕಿ ಆರ್ಟಿಫಿಶಿಯಲ್ ಆಗಿ ಹಣ್ಣು ಮಾಡಿದ್ದಾರಾ ಹೀಗೆ ತಿಳಿದುಕೊಳ್ಳಿ..
- ನೈಸರ್ಗಿಕವಾಗಿ ಹಣ್ಣಾದ ಮಾವು ನೀರಿನಲ್ಲಿ ಮುಳುಗುತ್ತದೆ, ಕೃತಕವಾಗಿ ಹಣ್ಣಾದ್ದು ತೇಲುತ್ತದೆ.
- ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವು ಹಸಿರು ಹಾಗೂ ಹಳದಿ ಅಲ್ಲಲ್ಲಿ ಇರುತ್ತದೆ. ನೈಸರ್ಗಿಕವಾಗಿ ಹಣ್ಣಾದ್ದು, ಸರಿಯಾಗಿ ಹಸಿರು ಹಾಗೂ ಹಳದಿ ಮಿಶ್ರಣ ಇರುತ್ತದೆ.
- ಕೃತಕವಾಗಿ ಹಣ್ಣಾದ ಮಾವು ರಸಭರಿತವಾಗಿರುತ್ತದೆ, ನೈಸರ್ಗಿಕವಾಗಿ ಹಣ್ಣಾದ್ರಲ್ಲಿ ರಸ ಕಡಿಮೆ
- ಹಣ್ಣು ತಿಂದಾಗ ನಾಲಿಗೆ ಕಡಿತ, ಉರಿ, ಲೂಸ್ ಮೋಷನ್ ಸಮಸ್ಯೆ ಕಾಣಿಸಿದರೆ ಅದು ನೈಸರ್ಗಿಕವಾಗಿ ಹಣ್ಣಾಗಿಲ್ಲ ಎಂದರ್ಥ