ಒಂದು ಕಾಲದಲ್ಲಿ ಅಡುಗೆಗೆ ಕಟ್ಟಿಗೆ ಮತ್ತು ಹಸುವಿನ ಸಗಣಿಯೇ ಪ್ರಮುಖ ಇಂಧನವಾಗಿತ್ತು. ಆದರೆ ಆಧುನಿಕ ಯುಗದಲ್ಲಿ LPG ಗ್ಯಾಸ್ ಸಿಲಿಂಡರ್‌ಗಳು ಮನೆಮನೆಗೂ ತಲುಪಿದ್ದು, ಅಡುಗೆ ಮಾಡುವ ಪ್ರಾಥಮಿಕ ಸಾಧನವಾಗಿವೆ. LPG ಸಿಲಿಂಡರ್ ಬಳಕೆ ಸುಲಭ, ಶುದ್ಧ ಮತ್ತು ಸಮಯ ಉಳಿಸುವಂತದ್ದು. ವಿಶೇಷವಾಗಿ ಗ್ರಾಮೀಣ ಮಹಿಳೆಯರ ಜೀವನದಲ್ಲಿ LPG ಮಹತ್ವದ ಬದಲಾವಣೆಯನ್ನು ತಂದಿದೆ. ಆದಾಗ್ಯೂ, ಸಿಲಿಂಡರ್ ಬಳಸುವಾಗ ಸುರಕ್ಷತೆಯ ಕಡೆ ಗಮನ ನೀಡುವುದು ಅತ್ಯಗತ್ಯ. ಅದರಲ್ಲೂ ಸಿಲಿಂಡರ್ ಅವಧಿ ಮುಗಿದಿದೆಯೇ ಎಂಬುದನ್ನು ಪರಿಶೀಲಿಸುವುದು ತುಂಬಾ ಮುಖ್ಯ.
ಸಿಲಿಂಡರ್ ಮೇಲೆ ಇರುವ ಗುರುತುಗಳನ್ನು ಹೇಗೆ ಓದುವುದು?
ಪ್ರತಿ LPG ಸಿಲಿಂಡರ್ ಮೇಲೆ ಲೋಹದ ರಾಡ್‌ಗಳಲ್ಲಿ ನಿರ್ದಿಷ್ಟ ಗುರುತುಗಳನ್ನು ಹಾಕಲಾಗುತ್ತದೆ. ಉದಾಹರಣೆಗೆ A-23, B-25, C-24, ಅಥವಾ D-23 ಎಂಬ ಅಂಕಿಗಳು ಕಾಣಬಹುದು.
ಅಕ್ಷರಗಳು: ತ್ರೈಮಾಸಿಕವನ್ನು ಸೂಚಿಸುತ್ತವೆ. A = ಜನವರಿ–ಮಾರ್ಚ್, B = ಏಪ್ರಿಲ್–ಜೂನ್, C = ಜುಲೈ–ಸೆಪ್ಟೆಂಬರ್, D = ಅಕ್ಟೋಬರ್–ಡಿಸೆಂಬರ್.
ಅಂಕೆಗಳು: ಅವಧಿ ಮುಗಿಯುವ ವರ್ಷವನ್ನು ಸೂಚಿಸುತ್ತವೆ. ಉದಾಹರಣೆ: C-24 ಎಂದರೆ 2024ರ ಜುಲೈ–ಸೆಪ್ಟೆಂಬರ್ ಒಳಗೆ ಸಿಲಿಂಡರ್ ಅವಧಿ ಮುಗಿಯುತ್ತದೆ.
ಅವಧಿ ದಿನಾಂಕ ತಿಳಿದುಕೊಳ್ಳುವುದೇಕೆ ಅಗತ್ಯ?
ಸುರಕ್ಷತೆ – ಅವಧಿ ಮೀರಿದ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯ ಅಪಾಯ ಹೆಚ್ಚಿರುತ್ತದೆ.
ಕಾರ್ಯಕ್ಷಮತೆ – ಹಳೆಯ ಸಿಲಿಂಡರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅಡುಗೆ ಪ್ರಕ್ರಿಯೆ ಅಡಚಣೆಯಾಗಬಹುದು.
ಅಪಘಾತ ತಡೆ – ಸಮಯಕ್ಕೆ ಮುನ್ನ ಅವಧಿ ಪರಿಶೀಲಿಸುವುದರಿಂದ ಬೆಂಕಿ ಮತ್ತು ಸ್ಫೋಟದಂತಹ ಅಪಾಯ ತಪ್ಪಿಸಬಹುದು.
ನಿಯಮ ಪಾಲನೆ – ಗ್ಯಾಸ್ ಕಂಪನಿಗಳ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗುತ್ತದೆ.
LPG ಸಿಲಿಂಡರ್‌ಗಳು ನಮ್ಮ ದೈನಂದಿನ ಬದುಕಿನಲ್ಲಿ ಅಡುಗೆ ಸುಲಭಗೊಳಿಸಿದರೂ, ಅವುಗಳನ್ನು ಅವಧಿ ಮೀರದೆ ಬಳಸುವುದು ಅತ್ಯಂತ ಮುಖ್ಯ. ಸಿಲಿಂಡರ್ ಮೇಲೆ ಇರುವ ಗುರುತುಗಳನ್ನು ಓದುವುದು ಸುಲಭವಾದುದರಿಂದ, ಪ್ರತಿ ಬಾರಿ ಹೊಸ ಸಿಲಿಂಡರ್ ಬಂದಾಗಲೇ ಅವಧಿ ಪರಿಶೀಲನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸುರಕ್ಷತೆ ನಮ್ಮ ಕೈಯಲ್ಲಿದೆ, ಆದ್ದರಿಂದ LPG ಸಿಲಿಂಡರ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವುದು ಅಗತ್ಯ ನೆನಪಿರಲಿ.