LIFESTYLE | Male ego ಇರುವ ಪಾರ್ಟ್ನರ್ ಜೊತೆ ಜೀವನ ನಡೆಸೋದು ಹೇಗೆ? ಕೆಲವು ಟಿಪ್ಸ್ ಇಲ್ಲಿದೆ..

ಮೇಘನಾ ಶೆಟ್ಟಿ ಶಿವಮೊಗ್ಗ

ಜನರೇಷನ್ ಎಷ್ಟೇ ಬದಲಾಗಿರಬಹುದು ಆದರೆ ಕೆಲ ಗಂಡಸರು ಬದಲಾಗೋದಿಲ್ಲ. ತನ್ನ ತಂದೆ, ಅವರ ತಂದೆ ಹೇಗೆ ಹೆಂಡತಿಯರನ್ನು ನಡೆಸಿಕೊಳ್ತಿದ್ರೋ ಅದರಲ್ಲಿ ಅರ್ಧದಷ್ಟಾದ್ರೂ ಹಿಡಿತವನ್ನು ನನ್ನ ಹೆಂಡತಿ ಮೇಲೆ ನಾನೂ ಇಟ್ಕೋಬೇಕು ಅನ್ನೋ ಭಾವನೆ ಅವರದ್ದಾಗಿರುತ್ತದೆ.

ಮಕ್ಕಳಿದ್ದಾಗ ಅವರ ತಂದೆ, ಅಜ್ಜ, ಮಾಮ, ಚಿಕ್ಕಪ್ಪ ಅವರಿವರನ್ನು ನೋಡಿ ಕಲಿತಿದ್ದು, ನಂತರ ಕೇಳಿ ಕಲಿತಿದ್ದು, ಹೀಗೆ ಗಂಡಸರು ಈಗೋ ಬೆಳೆಸಿಕೊಳ್ತಾರೆ. ಹೆಂಗಸರಿಗೆ ಇದು ಇಲ್ಲಾ ಅಂತಲ್ಲ, ಕೆಲವರಿಗೆ ಬೇಕಾಗಿರೋದು ಸಮಾನತೆ ಮಾತ್ರ.

ಈಗೋ ಇರುವ ಮನುಷ್ಯ ಕೆಟ್ಟವರಲ್ಲ. ಕೆಲವು ಕೆಟ್ಟ ಅಂಶಗಳನ್ನು ತಲೆಗೆ ತುಂಬಿಕೊಂಡಿರ‍್ತಾರಷ್ಟೆ. ಇದು ಸಮಯ ಕಳೆಯುತ್ತಿದ್ದಂತೆ ಬದಲಾಗುತ್ತದೆ. ಅವರಿಗೆ ನಾವು ಧಿಮಾಕಿನಲ್ಲಿ ಮಾತನಾಡ್ತಿದ್ದೀವಿ, ಅಹಂ ತುಂಬಿದೆ ಅನ್ನೋ ವಿಷಯವೇ ಗೊತ್ತಿರೋದಿಲ್ಲ. ತಾವು ಸರಿ, ಲೋಕವೆಲ್ಲ ತಪ್ಪು ಅಂತಷ್ಟೇ ತಿಳಿದುಕೊಂಡಿರುತ್ತಾರೆ.

ಈಗೋ ಇರುವ ಪಾರ್ಟ್ನ್‌ರ್ ನಿಮಗೆ ದೊರೆತಿದ್ದರೆ ಹೀಗೆ ಮಾಡಿ..

  • ಸುತ್ತಿ ಬಳಸಿ ಮಾತನಾಡಬೇಡಿ. ನೀವು ನನ್ನನ್ನು ಡಾಮಿನೇಟ್ ಮಾಡ್ತಿದ್ದೀರಿ, ನನಗೆ ಮನೆಯಲ್ಲೇ ಉಸಿರಾಡೋಕೆ ಆಗ್ತಿಲ್ಲ ಅನ್ನೋದನ್ನು ಕ್ಲಿಯರ್ ಆಗಿ ಹೇಳಿ.
  • NO ಈ ಶಬ್ದವನ್ನು ಹೇಳೋದಕ್ಕೆ ಪ್ರಾಕ್ಟೀಸ್ ಮಾಡಿ, ನಿಮಗಿಷ್ಟ ಇಲ್ಲದ ಯಾವುದೇ ವಿಷಯಕ್ಕೆ NO ಎಂದು ಹೇಳಿ, ಇದು ನಿಮಗೆ ಕಾನ್ಫಿಡೆನ್ಸ್ ಕೊಡುತ್ತದೆ.
  • ಅವರಿಗೆ ಈಗೋ ಇದೆ, ನಾನೇ ತಗ್ಗಿ ನಡೀತಿನಿ ಅನ್ನೋ ಆಪ್ಷನ್ ಹೆಚ್ಚು ಕಾಲ ಉಳಿಯೋದಿಲ್ಲ. ನಿಮ್ಮ ಒಪಿನಿಯನ್ ಸ್ಪಷ್ಟವಾಗಿ ಹೇಳಿ, ಆದರೆ ಸೂಕ್ಷ್ಮತೆ ಇರಲಿ, ದನಿ ಮೆತ್ತಗಿರಲಿ.
  • ಅವರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡ ನಂತರ ಕ್ಷಮೆ ಕೇಳ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅವರ ಪ್ರಕಾರ ನಿಮ್ಮದೇ ತಪ್ಪು.ನಿಮಗೆ ಎಲ್ಲದಕ್ಕೂ ಅವರ ಪರ್ಮಿಷನ್ ಬೇಕಿಲ್ಲ. ಇಂಡಿಪೆಂಡೆಂಟ್ ಆಗಿ ಜೀವನ ನಡೆಸೋದಕ್ಕೆ ಆರಂಭಿಸಿ.
  • ಅವರೇನಾದರೂ ಉತ್ತಮವಾಗಿ ನಡೆದುಕೊಂಡರೆ ಎನ್‌ಕರೇಜ್ ಮಾಡಿ, ನೀವು ಹೀಗೆ ಮಾಡಿದ್ದು ನನಗೆ ಖುಷಿ ಆಯ್ತು ಎಂದು ಹೇಳಿ ಹೊಗಳಿ.
  • ಅತಿಯಾದ ಹೊಗಳಿಕೆಯೂ ಬೇಡ, ಪ್ರತೀ ಬಾರಿ ಹೊಗಳಿಕೆ ಹೆಚ್ಚಾಗ್ಲಿ ಎಂದು ಆಶಿಸುತ್ತಾರೆ. ಇದು ಕೂಡ ಕಷ್ಟವೇ.
  • ಅವರು ಇಷ್ಟಪಡುವ ಕಸಿನ್, ಅಥವಾ ನಿಮ್ಮ ಮಗಳಿದ್ದರೆ ಆಕೆಯನ್ನು ಅವಳ ಗಂಡ ಹೀಗೆ ನಡೆದುಕೊಳ್ತಾನೆ, ನನ್ನ ಜಾಗದಲ್ಲಿ ಮುಂದೊಂದು ದಿನ ಅವಳು ಇರ‍್ತಾಳೆ, ಆಗಲೂ ತಗ್ಗಿಬಗ್ಗಿ ನಡೆಯೋಕೆ ಹೇಳ್ತಿರೋ ಅಥವಾ ನಿನ್ನದೇ ನಿಲುವು ತೆಗೆದುಕೊ ಎಂದು ಹೇಳ್ತಿರೋ ಎಂದು ಪ್ರಶ್ನಿಸಿ.

ಪ್ರತಿಯೊಬ್ಬರ ಜೀವನವೂ ವಿಭಿನ್ನ, ನಿಮ್ಮ ಜೀವನಸಂಗಾತಿ ಆಯ್ಕೆಯ ವೇಳೆ ಜಾಗರೂಕರಾಗಿರಿ, ಆಯ್ಕೆ ಮಾಡಿಕೊಂಡಾದಮೇಲೂ ಅವರ ಅಹಂನಿಂದ ಉಸಿರುಗಟ್ಟಿಸುವ ವಾತಾವರಣವಾದರೆ ಮುಂದಿನ ನಿರ್ಧಾರಕ್ಕೆ ಹಿಂಜರಿಯಬೇಡಿ. ನಿಮ್ಮ ಸಂಸಾರ ನಿಮ್ಮ ನಿರ್ಧಾರಗಳಿಂದಲೇ ನಡೆಯುತ್ತದೆ ಎನ್ನೋದು ನೆನಪಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!