ಸಾಮಾಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಹಸಿಮೆಣಸು
ಕಡ್ಲೆಬೇಳೆ
ಒಣಮೆಣಸು
ಜೀರಿಗೆ
ಹುಣಸೆಹಣ್ಣು
ಉದ್ದಿನಬೇಳೆ
ಶೇಂಗಾ
ಕಾಯಿತುರಿ
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಹಸಿಮೆಣಸು ಹಾಕಿ ಬಾಡಿಸಿ
ನಂತರ ಪಕ್ಕದಲ್ಲಿ ಇನ್ನೊಂದು ಸಣ್ಣ ಬಾಣಲಿಗೆ ಶೇಂಗಾ,ಕಡ್ಲೆಬೇಳೆ,ಉದ್ದಿನಬೇಳೆ,ಜೀರಿಗೆ,ಕಾಯಿತುರಿ,ಕೊತ್ತಂಬರಿ ಕಾಳು, ಒಣಮೆಣಸು ಹಾಕಿ ಬಾಡಿಸಿ
ಇದು ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಿ
ನಂತರ ಇಲ್ಲಿ ಈರುಳ್ಳಿ ಬೆಂದ ಮೇಲೆ ಕ್ಯಾಪ್ಸಿಕಂ ಹಾಕಿ ಉಪ್ಪು ಹಾಕಿ ಬಾಡಿಸಿ
ಕ್ಯಾಪ್ಸಿಕಂ ಸಂಪೂರ್ಣ ಬೆಂದಮೇಲೆ ಈ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕೊತ್ತಂಬರಿ ಹಾಕಿ ಬಿಸಿ ಅನ್ನ ಸೇರಿಸಿ ಎಂಜಾಯ್ ಮಾಡಿ