ಪತಿಯನ್ನು ಕೊಲ್ಲುವುದು ಹೇಗೆ? ಎಂಬ ಪುಸ್ತಕ ಬರೆದು ಪ್ರಖ್ಯಾತಳಾಗಿದ್ದ ಲೇಖಕಿ ತನ್ನ ಪತಿಯನ್ನೇ ಕೊಂದು ಸಿಕ್ಕಿಬಿದ್ದಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇದೊಂದು ವಿಚಿತ್ರ ಪ್ರಸಂಗ. ‘ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ (ʼನಿಮ್ಮ ಪತಿಯನ್ನು ಕೊಲ್ಲುವುದು ಹೇಗೆʼ) ಎಂಬ ಪುಸ್ತಕ  ಬರೆಯುವ ಮೂಲಕ ಭಾರೀ ಜನಪ್ರೀಯತೆ ಗಳಿಸಿದ್ದ ಪ್ರಖ್ಯಾತ ಲೇಖಕಿಯೊಬ್ಬರು ಸ್ವತಃ ತನ್ನ ಪತಿಯನ್ನು ಕೊಂದು ಸಿಕ್ಕಿಬಿದ್ದಿದ್ದು ಆಕೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಪೋರ್ಟ್‌ ಲ್ಯಾಂಡ್‌ ನ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿಗೆ ಒರೆಗಾನ್ (71) ಸಿಕ್ಕಿಬಿದ್ದ ಹಂತಕಿ. ನ್ಯಾನ್ಸಿ ಪ್ರಣಯ ಕಾದಂಬರಿಗಳನ್ನು ಬರೆಯುವ ಮೂಲಕವೇ ಅಪಾರ ಪ್ರಖ್ಯಾತಿ ಗಳಿಸಿದ್ದ ಲೇಖಕಿ. ಆಕೆಯ ಕೃತಿಗಳಾದ ‘ದಿ ರಾಂಗ್ ಹಸ್ಬೆಂಡ್’ ಮತ್ತು ‘ದಿ ರಾಂಗ್ ಲವರ್’ ನಂತಹ ಕಾದಂಬರಿಗಳು ಬಹಳಷ್ಟು ಪ್ರಸಿದ್ಧಿ ಗಳಿಸಿದ್ದವು. ಆಕೆ ಇತ್ತೀಚೆಗೆ ಬರೆದ “ಹೌ ಟು ಮರ್ಡರ್ ಯುವರ್ ಹಸ್ಬೆಂಡ್” ಎಂಬ ಪುಸ್ತಕ ಭರ್ಜರಿ ಮಾರಾಟ ಕಂಡಿತ್ತು. ಆಕೆಯ ಪತಿ ಡೇನಿಯಲ್ ಬ್ರೋಫಿ(63) ಶಿಕ್ಷಕನಾಗಿದ್ದ ಜೊತೆಗೆ ಒರೆಗಾನ್ ಪಾಕಶಾಲೆ ಸಂಸ್ಥೆಯಲ್ಲಿ ಬಾಣಸಿಗರಾಗಿ ಪ್ರಖ್ಯಾತಿ ಗಳಸಿದ್ದರು.
2018 ರ ಜೂನ್‌ ನಲ್ಲಿ ಸಂಸ್ಥೆಯ ಅಡುಗೆಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಡೇನಿಯಲ್ ಬ್ರೋಫಿ ಮೇಲೆ ಆಗಂತುಕರು ಎರಡು ಸುತ್ತಿನ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದರು. ಈ ಕುರಿತು ವಿಚಾರಣೆಗೆ ಇಳಿದಿದ್ದ ಪೊಲೀಸರಿಗೆ 2 ವರ್ಷ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ. ಆ ಬಳಿಕ ನ್ಯಾನ್ಸಿ ಮೇಲೆಯೇ ಅನುಮಾನ ಹುಟ್ಟುಕೊಂಡಿತ್ತು. ಅಲ್ಲದೆ ಆಕೆಯ ʼಗಂಡನನ್ನು ಕೊಲ್ಲುವುದು ಹೇಗೆಂಬʼ  ಕೃತಿ ಅವರ ಅನುಮಾನಕ್ಕೆ ಪುಷ್ಠಿ ಒದಗಿಸಿದೆ.
ಆಕೆಯನ್ನು ಕರೆಸಿ ವಿಚಾರಣೆ ನಡೆಸಿದ ವೇಳೆ ತಾನೇ ಪತಿಯನ್ನು ಕೊಂದಿದ್ದಾಗಿ ಬಾಯಿಬಿಟ್ಟಿದ್ದಾಳೆ. ತನ್ನ ಪುಸ್ತಕಗಳು ಮಾರಾಟವಾಗ ದಿದ್ದುದರಿಂದ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದ ಲೇಖಕಿ ಪತಿಯ ಮೇಲೆ 1.5 ಮಿಲಿಯನ್ ಡಾಲರ್ ಜೀವ ವಿಮೆಯನ್ನು ಮಾಡಿಸಿದ್ದಳು. ಬಳಿಕ ವಿಮೆ ಆಸೆ ಪತಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದು ವಿಮೆ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಳು. ಆಕೆ ಬರೆದ ಹೌ ಟು ಮರ್ಡರ್ ಯುವರ್ ಹಸ್ಬೆಂಡ್ ಪುಸ್ತಕ ಭರ್ಜರಿ ಮಾರಾಟ ಕಂಡಿತ್ತು. 7 ವಾರಗಳ ವಿಚಾರಣೆ ಬಳಿಕ ನ್ಯಾನ್ಸಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!