ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆ ಸುರಿಯುತ್ತಿದ್ರೆ ಏನಾದರೂ ಬಿಸಿ ಬಿಸಿ ತಿನ್ನೋಣ ಅನಿಸುವುದು ಸಾಮಾನ್ಯ. ಹಾಗಾದ್ರೆ ನಮ್ಮ ಮಂಗಳೂರಿನ ಬನ್ಸ್ ಒಮ್ಮೆ ಟ್ರೈಮಾಡಿ ನೋಡಿ. ಬನ್ಸ್ ಕರಾವಳಿ ಕರ್ನಾಟಕದ ಪ್ರಸಿದ್ಧ ತಿಂಡಿ. ಮಂಗಳೂರಿನಲ್ಲಿ ಇದರ ಉಗಮವಾದ್ದರಿಂದ ಮಂಗಳೂರು ಬನ್ಸ್ ಫೇಮಸ್ಸು. ಮೃದುವಾಗಿ, ಸಿಹಿಯಾಗಿ, ಪದರಪದರವಾಗಿ ಬನ್ಸ್ ಕಾಫಿ ಜೊತೆ ಸವಿಯಲು ಬಲು ರುಚಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಅಥವಾ ಮೈದಾ ಹಿಟ್ಟು, ಬಾಳೆಹಣ್ಣು, ಎಣ್ಣೆ, ಸಕ್ಕರೆ, ಮೊಸರು, ಉಪ್ಪು,ಅಡುಗೆಸೋಡಾ, ಜೀರಿಗೆ
ಮಾಡುವ ವಿಧಾನ:
ಮೈದಾ ಅಥವಾ ಗೋಧಿ ಹಿಟ್ಟನ್ನು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನೊಂದಿಗೆ ಕಲಸಬೇಕು. ಕಲಸುವಾಗ ಸಕ್ಕರೆ, ಉಪ್ಪು, ಮೊಸರು, ಅಡುಗೆ ಸೋಡಾ, ಜೀರಿಗೆಗಳನ್ನೂ ಸೇರಿಸಬೇಕು. ಬಾಳೆಹಣ್ಣಿನಲ್ಲಿ ನೀರಿನಂಶವಿರುವುದರಿಂದ ನೀರನ್ನು ಬಳಸದೆ ಹಿಟ್ಟು ಕಲಸಬೇಕು. ಕಲಿಸಿದ ಹಿಟ್ಟನ್ನು ಕನಿಷ್ಠ 4 ಗಂಟೆಗಳ ಕಾಲ ಹಾಗೇ ಬಿಡಬೇಕು. ಆಮೇಲೆ ಪೂರಿಯ ಆಕಾರದಲ್ಲಿ ಎಣ್ಣೆಯಲ್ಲಿ ಕರಿದರೆ ರುಚಿ ರುಚಿಯಾದ ಬಾಳೆಹಣ್ಣಿನ ಬನ್ಸ್ ಸಿದ್ದವಾಗುತ್ತದೆ.