ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಸಾಂಪ್ರದಾಯಿಕ ಮತ್ತು ಆಧುನಿಕ ಜೀವನಶೈಲಿಯನ್ನು ಸಮತೋಲನದಲ್ಲಿಟ್ಟು ಸಾಗಿಸುತ್ತಿರುವ ಸಾರ ತಮ್ಮ ಆದಾಯ ಮತ್ತು ಹೂಡಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಮೊತ್ತ ಸಣ್ಣದಾಗಿದ್ದರೂ ಕೂಡ ನಾವು ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಬೇಕು ಎನ್ನೋದನ್ನು ನಾನು ಕಲಿತಿದ್ದೇನೆ. ನನ್ನ ಗೂಗಲ್ ಪೇ ಒಟಿಪಿ ಕೂಡ ನನ್ನ ತಾಯಿಗೆ ಹೋಗುತ್ತದೆ. ನಾನು ವಿಮಾನ ಟಿಕೆಟ್ ಬುಕ್ ಮಾಡಲು ಕೂಡ ನನ್ನ ತಾಯಿ ಒಟಿಪಿ ಕೊಡಬೇಕಾಗುತ್ತದೆ. ನನ್ನ ಹಣವನ್ನು ತಾಯಿಯೇ ನಿಭಾಯಿಸುತ್ತಾರೆ.
ಚಿನ್ನ, ರಿಯಲ್ ಎಸ್ಟೇಟ್, ಸ್ಟಾಕ್ ಮಾರ್ಕೆಟ್‌ಗಳಲ್ಲಿ ನಾನು ಹಣ ಹೂಡಿಕೆ ಮಾಡ್ತೀನಿ ಎಂದು ನಟಿ ಸಾರಾ ಅಲಿ ಖಾನ್ ಹೇಳಿದ್ದಾರೆ.