ಇದು ಎಲ್ಲರ ಸಮಸ್ಯೆ. ಸಂಬಳ ಆಗಿ ವಾರಕ್ಕೆ ಎಲ್ಲ ದುಡ್ಡು ಖರ್ಚಾಗಿ ಖಾಲಿ ಕೈಯಲ್ಲಿ ಇರುತ್ತೇವೆ. ಮುಖ್ಯವಾದ ವಸ್ತುಗಳನ್ನು ಕೊಳ್ಳೋದಕ್ಕೆ ಆಗದಂಥ ಪರಿಸ್ಥಿತಿ ತಂದುಕೊಳ್ಳುತ್ತೇವೆ. ಎಷ್ಟೇ ದುಡಿದರೂ ಸಂಬಳ ಸಾಕಾಗೋದಿಲ್ಲ. ಅಥವಾ ಬಂದ ಸಂಬಳವನ್ನು ಸರಿಯಾದ ರೀತಿ ಮ್ಯಾನೇಜ್ ಮಾಡೋದಕ್ಕೆ ಬರೋದಿಲ್ಲ. ಸಂಬಳಕ್ಕಿಂತ ಹೆಚ್ಚು ಕಮಿಟ್ಮೆಂಟ್ಗಳನ್ನು ಮಾಡಿಕೊಂಡರೆ ಸೇವಿಂಗ್ಸ್ ಮಾಡೋದು ಅಸಾಧ್ಯ. ಕಮಿಟ್ಮೆಂಟ್ಗಳನ್ನು ಕಮ್ಮಿ ಮಾಡಿಕೊಂಡು ಸ್ವಲ್ಪವಾದ್ರೂ ಹಣ ಉಳಿಸ್ತೀರಾ ಅಂದರೆ ನಿಮಗೆ ಸಹಾಯ ಆಗೋ ಟಿಪ್ಸ್ ಇಲ್ಲಿದೆ…
- ಎರಡು ಅಕೌಂಟ್ ಮಾಡಿಕೊಳ್ಳಿ. ಒಂದು ಅಕೌಂಟ್ಗೆ ಫೋನ್ಪೆ, ಗೂಗಲ್ ಪೆ, ಏನೂ ಇಡಬೇಡಿ. ಸಂಬಳ ಬಂದ ತಕ್ಷಣ ಸ್ವಲ್ಪ ಹಣ ಆ ಅಕೌಂಟ್ಗೆ ಹಾಕಿಬಿಡಿ. ಉಳಿದ ಹಣದಲ್ಲೇ ಮ್ಯಾನೇಜ್ ಮಾಡಿ.
- ತಿಪ್ಪೆಗೆ ಎಸೆದರೂ ಲೆಕ್ಕ ಇಡಿ ಅಂತ ದೊಡ್ಡವರು ಸುಮ್ಮನೆ ಹೇಳೋದಿಲ್ಲ. ಪೆನ್ ತೆಗೆದುಕೊಂಡರೂ ಲೆಕ್ಕ ಬರೆಯಿರಿ. ನಿಮ್ಮ ಹಣ ಎಲ್ಲಿ ಹೋಗುತ್ತಿದೆ ನೋಡೋಣ.
- ಸಂಬಳ ಬಂದ ತಕ್ಷಣ ಹಣವನ್ನು ಭಾಗ ಮಾಡಿ, ಬಾಡಿಗೆಗೆ, ದಿನಸಿಗೆ, ಲೋನ್ಗೆ, ಇಎಮ್ಐಗೆ, ಖರ್ಚಿಗೆ ಹೀಗೆ ಎಲ್ಲದಕ್ಕೂ ಡಿವೈಡ್ ಮಾಡಿ.
- ಅನಾವಶ್ಯಕ ವಸ್ತುಗಳ ಖರೀದಿಗೆ ಮುನ್ನ ಒಮ್ಮೆ ಯೋಚಿಸಿ. ಸುಮ್ಮನೆ ಇರಲಿ ಅಂತ ಕೊಳ್ಳೋದನ್ನು ನಿಲ್ಲಿಸಿಬಿಡಿ.
- ತಿಂಗಳಿಗೊಂದು ಸಿನಿಮಾ, ಆರು ತಿಂಗಳಿಗೊಂದು ಟ್ರಿಪ್ ಎಂದು ನಿರ್ಧಾರ ಮಾಡಿ. ಅದಕ್ಕೆ ಬೇಕಾದ ಹಣವನ್ನು ಕಷ್ಟಪಟ್ಟು ನೀವೇ ಉಳಿಸಿ.
- ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಿ. ಕ್ರೆಡಿಟ್ ಕಾರ್ಡ್ ಬಳಸುವ ಅಭ್ಯಾಸ ಒಮ್ಮೆ ಬಂದರೆ ಹೋಗುವುದು ಕಷ್ಟ.
- ಇನ್ಶೂರೆನ್ಸ್ ಪಾಲಿಸಿ, ಹಣ ಉಳಿಸುವ ಬೇರೆ ಬೇರೆ ಪಾಲಿಸಿಗಳನ್ನು ಮಾಡಿಸಿ.
- ಒಂದು ತಿಂಗಳು ಬರೀ ಎರಡು ಸೇವ್ ಅಷ್ಟೇ ಮಾಡಿದಿರಿ ಎಂದುಕೊಳ್ಳಿ. ಮುಂದಿನ ತಿಂಗಳು ಒಂದು ಸಾವಿರ ಹೆಚ್ಚೇ ಸೇವ್ ಮಾಡಿ. ನನ್ನ ಬಳಿ ಇರೋದು ಇಷ್ಟೆ ಹಣ, ಇದರಲ್ಲೇ ಎಲ್ಲವನ್ನೂ ಅಡ್ಜಸ್ಟ್ ಮಾಡಬೇಕು ಅನ್ನೋದು ತಲೆಯಲ್ಲಿರಲಿ.
- ಸೇವಿಂಗ್ಸ್ ಇಲ್ಲದವರು ಹೆಲ್ತ್ ಇನ್ಶೂರೆನ್ಸ್ ಮಾಡಿಸಿರಿ. ಅಕಸ್ಮಾತ್ ಆಗಿ ಬರುವ ಆರೋಗ್ಯ ಸಮಸ್ಯೆಗಳಿಂದ ಹೈರಾಣಾಗುವುದು ತಪ್ಪುತ್ತದೆ.
- ಕ್ಯಾಶ್ ಡ್ರಾ ಮಾಡಿ. ಆನ್ಲೈನ್ ಟ್ರಾನ್ಸಾಕ್ಷನ್ಗಳಲ್ಲಿ ಎಷ್ಟು ಹಣ ಖರ್ಚಾದರೂ ಕೈಯಿಂದ ನೋಟುಗಳನ್ನು ಎಣಿಸಿ ಕೊಟ್ಟಷ್ಟು ದುಃಖ ಆಗೋದಿಲ್ಲ.
- ಶಾಪಿಂಗ್, ಸೇಲ್ಸ್ಗಳನ್ನು ಅವಾಯ್ಡ್ ಮಾಡಿ. ಬೇಕಾಗಿದ್ದನ್ನು ಮಾತ್ರ ಖರೀದಿ ಮಾಡಿ.