ಸ್ನೇಹಿತರೋ, ಗಂಡ-ಹೆಂಡತಿಯೋ, ಪ್ರೇಯಸಿ-ಪ್ರಿಯಕರನೋ ಅಥವಾ ಅಣ್ಣ-ತಮ್ಮನೋ ಯಾರೊಟ್ಟಿಗೇ ಆಗಲಿ ಕೆಟ್ಟ ಜಗಳ ನಡೆದ ನಂತರ ಮಾತನಾಡದೆ ಇರುವುದು ಅಸಾಧ್ಯ. ಆದರೆ ಮಾತನಾಡಿಸೋದು ಹೇಗೆ? ತಪ್ಪು ಯಾರದ್ದೇ ಆಗಿರಲಿ ಸಂಬಂಧ ಉಳಿಯುವುದು ಮುಖ್ಯವಾದ ವಿಷಯ, ಪ್ರತಿ ಬಾರಿ ನಾನೇ ಮಾತನಾಡಬೇಕಾ ಎನ್ನುವ ಅಹಂ ಇಲ್ಲದೆ ಹೋದರೆ ಎಲ್ಲವೂ ಸಾಧ್ಯ. ಹೇಗೆ ಮಾತನಾಡಿಸೋದು? ಜಗಳದ ನಂತರ ಏನು ಮಾಡಬೇಕು? ಇದನ್ನು ಓದಿ..
ಸಣ್ಣ ಬ್ರೇಕ್ ತೆಗೆದುಕೊಳ್ಳಿ. ಒಬ್ಬರ ಮುಖ ಒಬ್ಬರಿಗೆ ಕಾಣಬಾರದು, ನಿಮ್ಮ ಆಲೋಚನೆಗಳಿಗೆ ಸಮಯ ನೀಡಿ. ಕದಡಿದ ಆಲೋಚನೆಗಳೆಲ್ಲ ಕೆಳಗೆ ಬಂದು ಸೆಟಲ್ ಆಗಿ ರಿಯಾಲಿಟಿ ಕಾಣುತ್ತದೆ.
ಸರಿಯಾದ ಸಮಯ ಯಾವುದು ಎಂದು ಯಾರಿಗೂ ಹೇಳೋಕೆ ಆಗೋದಿಲ್ಲ. ಆದರೆ ನಿಮಗೆ ಗೊತ್ತಿರುತ್ತದೆ. ಯಾವ ಸಮಯ ಬೆಸ್ಟ್ ಎಂದು ನಿಮಗೆ ಗೊತ್ತಿರುತ್ತದೆ. ಮಾಮೂಲಿಯಾಗಿ ಮಾತು ಆರಂಭಿಸಿ, ಸಾರಿ ಕೇಳುವುದಿದ್ದರೆ ಕೇಳಿ ಜಗಳ ಮುಗಿಸಿ.
ನಿಮ್ಮಿಂದ ಇನ್ನೊಂದು ವ್ಯಕ್ತಿಗೆ ಹರ್ಟ್ ಆಗಿದೆ ಅನ್ನೋದನ್ನು ಮೊದಲು ನೀವು ಒಪ್ಪಿಕೊಳ್ಳಿ. ಈ ಮೈಂಡ್‌ಸೆಟ್‌ನಲ್ಲಿ ಮಾತು ಆರಂಭಿಸಿ. ಅವರು ಕೇಳೋಕೆ ರೆಡಿಯಾದಾಗ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ.
ನಿಮಗೆ ಯಾಕೆ ಹಾಗೆ ಅನಿಸಿತ್ತು? ನಿಮ್ಮ ಪಾಯಿಂಟ್ ಆಫ್ ವ್ಯೂ ಎಕ್ಸ್‌ಪ್ಲೇನ್ ಮಾಡಿ. ಎಲ್ಲರಿಗೂ ಇನ್ನೊಬ್ಬರ ಪಾಯಿಂಟ್ ಆಫ್ ವ್ಯೂ ಅರ್ಥ ಆಗೋದಿಲ್ಲ. ಬಾಯಿಬಿಟ್ಟು ಹೇಳಬೇಕು. ಆಗ ಸ್ವಲ್ಪ ಸಮಸ್ಯೆ ಕಡಿಮೆಯಾಗುತ್ತದೆ.
ಇಬ್ಬರೂ ಕಾಮ್‌ಡೌನ್ ಆದ ನಂತರ ಸಮಸ್ಯೆಯ ರೂಟ್‌ಕಾಸ್ ಬಗ್ಗೆ ಮಾತನಾಡಿ. ಅದಕ್ಕೆ ಪರಿಹಾರ ಹುಡುಕಿ.