ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೈಲ್ಸ್ ಅನ್ನೋದು ದೀರ್ಘಕಾಲದ ಮಲಬದ್ಧತೆ ಸಮಸ್ಯೆ. ಆಹಾರದಲ್ಲಿ ನಾರಿನಾಂಶ ಹಾಗೂ ನೀರು ಸೇವನೆ ಇಲ್ಲದಿದ್ದಾಗ ಈ ಸಮಸ್ಯೆ ಕಾಡುತ್ತದೆ. ಇದರಿಂದ ಎಷ್ಟೋ ಸಮಯ ಮುಜುಗರಕ್ಕೂ ಒಳಗಾಗುತ್ತೇವೆ. ನೀವೂ ಪೈಲ್ಸ್ ನಿಂದ ಬಳಲುತ್ತಿದ್ದರೆ ಈ ಮನೆಮದ್ದು ಟ್ರೈ ಮಾಡಿ…
- ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಕೆಲವು ನಿಮಿಷ ನೀರಿನಲ್ಲಿ ಇರಿ.
- ನೋವು, ತುರಿಕೆಯಾದಾಗ ಕೋಲ್ಡ್ ಪ್ಯಾಕ್ ಇರಿಸಿ.
- ಮಲವಿಸರ್ಜನೆ ಬಳಿಕ ಜೋರಾಗಿ ಒರೆಸಿಕೊಳ್ಳಬೇಡಿ.
- ನಿಮ್ಮ ಒಳ ಉಡುಪು ಕಾಟನ್ ಆಗಿರಲಿ.
- ಮಲ ವಿಸರ್ಜನೆ ಮಾಡುವುದನ್ನು ತಡೆದುಕೊಳ್ಳಬೇಡಿ.
- ಇಂಡಿಯನ್ ಟಾಯ್ಲೆಟ್ ಬಳಸೋದು ಒಳ್ಳೆಯದು.
- ಹೆಚ್ಚು ನೀರು ಕುಡಿಯಿರಿ.
- ವ್ಯಾಯಾಮ ಮಾಡಿ.
- ತುಂಬಾ ಹೊತ್ತು ಒಂದೇ ಜಾಗದಲ್ಲಿ ಕೂರಬೇಡಿ. 5 ನಿಮಿಷಕ್ಕೊಮ್ಮೆ ಓಡಾಡಿ.
- ನಾರಿನಾಂಶವುಳ್ಳ ಆಹಾರ ಸೇವಿಸಿ.