ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ದಿನವನ್ನು ಹಬ್ಬದಂತೆ ಆಚರಿಸಲು ಶಾಲಾ ಮಕ್ಕಳಿಗೆ ರಜೆ ನೀಡಿ ಎನ್ನುವ ಕೂಗು ಎಲ್ಲೆಡೆ ಕೇಳುತ್ತಿದೆ.
ಆದರೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ರಜೆ ನೀಡೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ರಾಮನ ಹಬ್ಬಕ್ಕೆ ರಜೆ ನೀಡಿದರೆ ಮಕ್ಕಳು ಆಟ ಆಡಲು ತೆರಳುತ್ತಾರೆ, ಇನ್ಯಾವುದೋ ಕೆಲಸದಲ್ಲಿ ನಿರತರಾಗುತ್ತಾರೆ. ಅದಕ್ಕಾಗಿ ಶಾಲೆಗಳಲ್ಲಿಯೇ ರಾಮನ ಪ್ರಾಣಪ್ರತಿಷ್ಠೆ ವೀಕ್ಷಣೆಗೆ ಅವಕಾಶ ನೀಡಲು ಕ್ಯಾಮ್ಸ್ ನಿರ್ಧರಿಸಿದೆ.
ಮಕ್ಕಳಿಗೆ ಸಾಂಸ್ಕೃತಿಕ ಉಡುಪುಗಳನ್ನು ಧರಿಸಲು ಈಗಾಗಲೇ ಹೇಳಾಗಿದೆ. ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಕ್ಲಾಸ್ ಬಂದ್ ಮಾಡಿ ಮಕ್ಕಳಿಗೆ ಲೈವ್ ತೋರಿಸಲಾಗುವುದು. ಇದರಿಂದಾಗಿ ಪಾಠಕ್ಕೆ ಪಾಠವೂ ಆಗುತ್ತದೆ. ಶ್ರೀರಾಮನನ್ನು ಕಣ್ತುಂಬಿಕೊಂಡಂತೆಯೂ ಆಗುತ್ತದೆ ಎಂದು ಕ್ಯಾಮ್ಸ್ ಹೇಳಿದೆ.