ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ನವನಗರದ ಕಾನೂನು ವಿಶ್ವವಿದ್ಯಾಲಯ ಹತ್ತಿರ ವ್ಯಕ್ತಿಯೊಬ್ಬರು ಕೊಲೆ ಮಾಡಿದ ಮೂವರನ್ನು ನವನಗರ ಪೊಲೀಸರು ಬಂಧಿಸಿದ್ದಾರೆ.
ವಿಠ್ಠಲ ರಾಥೋಡ ಕೊಲೆಯಾದ ವ್ಯಕ್ತಿ. ವಿಮಲಾಭಾಯಿ ಮೇಘವ್ ಸತನಾಮಿ, ಭಗವಾನ್ ದಾಸ್ ಶತನಾಮಿ ಹಾಗೂ ವಿಮಲಾ ಶತನಾಮಿ ಬಂಧಿತ ಆರೋಪಿಗಳು.
ಜ. ೧೦ ರಂದು ವಿಜಯಪುರ ಜಿಲ್ಲೆಯ ವಿಠ್ಠಲ ರಾಥೋಡ್ ಎಂಬ ವ್ಯಕ್ತಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು, ಮೃತಪಟ್ಟಿರುವ ಕುರಿತು ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ತಿಳಿದುಬಂದಿದೆ. ಕೊಲೆ ಮಾಡಿ ಕಟ್ಟಡ ಮೇಲಿಂದ ಬಿದ್ದು, ಮೃತಪಟ್ಟಿರುವ ಕಥೆ ಕಟ್ಟಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

