ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಮೇಯರ್ ವೀಣಾ-ಉಪ ಮೇಯರ್ ಆಗಿ ಸತೀಶ ಆಯ್ಕೆ

ಹೊಸದಿಗಂತ ವರದಿ ಧಾರವಾಡ:

ತೀವ್ರ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್-ಉಪಮೇಯರ್ ಸ್ಥಾನ ಭಾರತೀಯ ಜನತಾ ಪಕ್ಷಕ್ಕೆ ಲಭಿಸಿದೆ. ಈ ಮೂಲಕ ಪಾಲಿಕೆಯಲ್ಲಿ ಬಿಜೆಪಿ ಅಧಿಪಥ್ಯ ಮುಂದುವರೆದಿದೆ.

ಭಾರತೀಯ ಜನತಾ ಪಕ್ಷದ ವೀಣಾ ಬರದ್ವಾಡ ಮೇಯರ್ ಆಗಿ, ಸತೀಶ ಹಾನಗಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದು ಇನ್ನೇನು ಘೋಷಣೆಯಷ್ಟೇ ಬಾಕಿಯಿದೆ.

ಈ ಮೊದಲು ಬಣಜಿಗ ಸಮಾಜದ ಮೀನಾಕ್ಷಿ ವಂಟಮೂರಿ ಅವರನ್ನ ಆಯ್ಕೆ ಮಾಡಲಾಗಿತ್ತು. ಆದರೆ ಕೆಲವು ಸದಸ್ಯರು ಪಂಚಮಸಾಲಿ ಸಮಾಜದವರಿಗೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದರು.

ಇಂದು ಬೆಳಿಗ್ಗೆ ಸೆಂಟ್ರಲ್ ಕ್ಷೇತ್ರದ ಹಾಗೂ ಹಾಲಿ ಶಾಸಕ ಮಹೇಶ ಟೆಂಗಿನಕಾಯಿ ನಿವಾಸವಿರುವ ವಾರ್ಡ್ ಸದಸ್ಯೆ ವೀಣಾ, 32ನೇ ವಾರ್ಡ್ ಸತೀಶ ಅವರನ್ನ ಆಯ್ಕೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!