ಹೊಸದಿಗಂತ ಡಿಜಿಟಲ್ ಡೆಸ್ಕ್
ಕಳೆದ ರಾತ್ರಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಕಿಡಿಗೇಡಿಗಳು ಹಾಕಿದ ಪೋಸ್ಟ್ ಒಂದರಿಂದ ರೊಚ್ಚಿಗೆದ್ದ ಜನರಿಂದ ಪೊಲೀಸ್ ಠಾಣೆಯ, ಜೀಪ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಸಂಬಂಧ ಅಲರ್ಟ್ ಆಗಿರುವಂತ ಪೊಲೀಸರು 6 ಎಫ್‌ಐಆರ್ ದಾಖಲಿಸಿದ್ದಾರೆ.
ಅಲ್ಲದೇ 60ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರವರೆಗೆ ನಗರದಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಮಕ್ಕಾ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಎಡಿಟ್ ಪೋಟೋದಿಂದಾಗಿ ರೊಚ್ಚಿಗೆದ್ದ ಮುಸ್ಲೀಂ ಪುಂಡರ ಗುಂಪು, ನಗರದಲ್ಲಿನ ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸ್ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿ, ಕಳೆದ ರಾತ್ರಿ ಜಖಂಗೊಳಿಸಿದ್ದರು.
ಈ ಸಂಬಂಧ ಪೊಲೀಸರು ಕೂಡಲೇ ಬಿಗಿ ಕ್ರಮ ಕೈಗೊಂಡು, 6 ಎಫ್‌ಐಆರ್ ಇದುವರೆಗೆ ದಾಖಲಿಸಿ, 60ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ ಸಿಸಿಟಿವಿ, ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಮತ್ತಷ್ಟು ಪುಂಡರನ್ನು ಬಂಧಿಸೋ ಸಾಧ್ಯತೆ ಇದೆ.