ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್-ಇಸ್ರೇಲ್ ಯುದ್ಧದಿಂದ ಭಾರತ ನಷ್ಟ ಅನುಭವಿಸುತ್ತಿದೆ. ಭಾರತದಿಂದ ರಫ್ತಾಗುತ್ತಿದ್ದ ಚಹಾ ರಫ್ತು ಈಗ ಸ್ಥಗಿತಗೊಂಡಿದೆ.
ರಷ್ಯಾ ನಂತರ ಎರಡನೇ ಅತೀ ಹೆಚ್ಚು ಚಹಾ ಇರಾನ್‌ಗೆ ಭಾರತದಿಂದ ಹೋಗುತ್ತಿತ್ತು. ಈಗ ಇರಾನ್ ಇಸ್ರೇಲ್ ಯುದ್ಧದಿಂದಾಗಿ ರಫ್ತು ನಿಂತಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ರಫ್ತಾಗಬೇಕಿದ್ದ ಚಹಾ ಸ್ಥಗಿತಗೊಂಡಿದೆ.
2024 ರಲ್ಲಿ ಭಾರತ ಒಟ್ಟು 7,111 ಕೋಟಿ ರೂ. ಮೌಲ್ಯದ 255 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಇದರಲ್ಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳವು 4,833 ಕೋಟಿ ರೂ. ಮೌಲ್ಯದ 154.81 ಮಿಲಿಯನ್ ಕೆಜಿ ರಫ್ತು ಮಾಡಿದರೆ ದಕ್ಷಿಣ ಭಾರತದಿಂದ 2,278 ಕೋಟಿ ರೂ. ಮೌಲ್ಯದ 99.86 ಮಿಲಿಯನ್ ಕೆಜಿ ರಫ್ತು ಮಾಡಿದೆ.
2022 ರಲ್ಲಿ 22 ಮಿಲಿಯನ್ ಕೆಜಿ, 2023 ರಲ್ಲಿ 5.9 ಮಿಲಿಯನ್ ಕೆಜಿ, 2024 ರಲ್ಲಿ 31 ಮಿಲಿಯನ್ ಕೆಜಿ ಚಹಾವನ್ನು ಭಾರತ ಇರಾನ್‌ಗೆ ರಫ್ತು ಮಾಡಿದೆ.