ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಪ್ರಮುಖ ಗ್ಯಾರೆಂಟಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯೋಕೆ ಜನರು ಮುಗಿಬಿದ್ದಿದ್ದು, ಈವರೆಗೂ ಒಂದು ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿ ಸಲ್ಲಿಕೆ ಆರಂಭವಾಗಿ 96 ದಿನ ಕಳೆದಿದ್ದು, ಒಂದು ಕೋಟಿಗೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸೋಕೆ ಯಾವುದೇ ಡೆಡ್‌ಲೈನ್ ಇಲ್ಲ, ವರ್ಷವಿಡೀ ಅರ್ಜಿ ಸಲ್ಲಿಸಬಹುದು. ಮೊದಲ ದಿನವೇ 96 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದು, ದಿನ ಹೆಚ್ಚಾದಂತೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿತ್ತು.
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು, ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿಯೂ ಅರ್ಜಿ ಸಲ್ಲಿಸಬಹುದು. ತಿಂಗಳ 25ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳ ವಿದ್ಯುತ್ ಬಿಲ್ ಉಚಿತವಾಗಿರಲಿದೆ.