ಕೊಲ್ಕತ್ತಾದಲ್ಲಿ ಭಾರೀ ಅಗ್ನಿ ಅವಘಡ: ಅಪಾರ ಆಸ್ತಿ ನಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಕ್-ಶಿಫ್ಟ್ ಕಾರ್ ಮೆಕ್ಯಾನಿಕಲ್ ಗ್ಯಾರೇಜ್‌ನಲ್ಲಿ ಭಾರಿ ಅಗ್ನಿ ಅವಘಡ ಉಂಟಾದ ಘಟನೆ ಕೊಲ್ಕತ್ತಾದ ತಂಗ್ರಾ ಪ್ರದೇಶ ಕ್ರಿಸೋಫರ್‌ ರಸ್ತೆಯಲ್ಲಿ ನಡೆದಿದೆ. ಅಗ್ನಿಯ ಜ್ವಾಲೆ ಅಕ್ಕಪಕ್ಕದ ಅಂಗಡಿಗಳು ಹಾಗೂ ಗುಡಿಸಲುಗಳಿಗೆ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಕೆನ್ನಾಲಿಗೆ ಹೆಚ್ಚಾದ ಕಾರಣದಿಂದಾಗಿ ಆರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಸಫಲವಾಗಲಿಲ್ಲ. ಬಳಿಕ 4 ವಾಹನಗಳನ್ನು ಸ್ಥಳಕ್ಕೆ ಕರೆಸಿ ಬೆಂಕಿಯನ್ನು ಹತೋಟಿಗೆ ತಂದರು. ಅವಘಡಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.

ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ತಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಪಾರ ಆಸ್ತಿ ಆಹುತಿಯಾಗಿದ್ದು, ಆ ಸ್ಥಳದಿಂದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಬದುಕು ನಡೆಸಲು ಗುಡಿಸಲು, ಗ್ಯಾರೇಜ್‌, ಸಣ್ಣ-ಪುಟ್ಟ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದ ಜನರಿಗೀಗ ದಿಕ್ಕು ತೋಚದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!