ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶವಂತಪುರ ಫ್ಲೈ ಓವರ್ ಕೆಳಗೆ ಬೃಹತ್ ಗಾತ್ರ ಟ್ರಕ್ ಒಂದು ಸಿಲುಕಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಎತ್ತರ ಮಿತಿ ಅರಿಯದೇ ಚಲಾಯಿಸಿದ್ದರಿಂದ ಫ್ಲೈ ಓವರ್ ಕೆಳಭಾಗದಲ್ಲಿ ಟ್ರಕ್ ಸಿಕ್ಕಿ ಹಾಕಿಕೊಂಡಿದೆ. ಟ್ರಕ್ ಹೊರ ತೆಗೆಸಲು ಟ್ರಾಫಿಕ್ ಪೊಲೀಸರು ಈಗ ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಕ್ರೇನ್ ಕರೆಸಿ ಟ್ರಕ್ ಹೊರಗೆ ತೆಗೆಯಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ