ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸ್ಕ್ರೀಮ್ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪರವಾನಗಿಯನ್ನು ಎಫ್ಎಸ್ಎಸ್ಎಐ ರದ್ದುಗೊಳಿಸಿದೆ.
ಪುಣೆಯ ಮಲಾಡ್ ವೆಸ್ಟ್ನಲ್ಲಿ 26 ವರ್ಷದ ವೈದ್ಯರೊಬ್ಬರು ಆನ್ಲೈನ್ನಲ್ಲಿ ಐಸ್ಕ್ರೀಂ ಕೋನ್ ಆರ್ಡರ್ ಮಾಡಿದ್ದರು, ಅದರ ಒಂದು ಕೋನ್ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು.
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ಈ ಐಸ್ಕ್ರೀಮ್ನಲ್ಲಿ ಬೆರಳನ್ನು ಕಂಡಾಗ ಮೊದಲು ವಾಲ್ನಟ್ ಎಂದುಕೊಂಡೆವು ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ.
ನಾನು ಮೂರು ಐಸ್ಕ್ರೀಂಗಳನ್ನು ಆರ್ಡರ್ ಮಾಡಿದ್ದೆ, ನಾನು ಬಟರ್ಸ್ಕಾಚ್ ಐಸ್ಕ್ರೀಂ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತಾಯಿತು ನಾನು ವಾಲ್ನಟ್ ಅಥವಾ ಚಾಕೊಲೇಟ್ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.