ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್ ಆರಂಭವಾಗಿದೆ. ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಉಪಗ್ರಹವನ್ನು ಹೊತ್ತ ಎಲ್‌ಎಂವಿ-3 ರಾಕೆಟ್ ನಭದತ್ತ ಚಿಮ್ಮಲಿದೆ.
ಚಂದ್ರಯಾನ-3ರ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿದ್ದು, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನೇರವಾಗಿ ಉಡಾವಣೆಯನ್ನು ಕಣ್ತುಂಬಿಕೊಳ್ಳಲು ನೂರಾರು ಕನ್ನಡಿಗರು ಆಗಮಿಸಿದ್ದಾರೆ.
ಲಡಾಕ್ ಸೈನ್ಸ್ ಫೌಂಡೇಷನ್ ಚಂದ್ರಯಾನ ವೀಕ್ಷಣೆಗೆ ಬೆಂಗಳೂರಿನಿಂದ 130 ಜನರನ್ನು ಕರೆದೊಯ್ಯುತ್ತಿದ್ದು, ಇದರಲ್ಲಿ 100ಕ್ಕೂ ಹೆಚ್ಚು ಮಂದಿ ಕನ್ನಡಿಗರೇ ಆಗಿದ್ದಾರೆ. ಸುಮಾರು ಹತ್ತು ಸಾವಿರ ಜನರು ಉಡಾವಣೆಯನ್ನು ವೀಕ್ಷಿಸಲು ಇಸ್ರೋ ಲಾಂಚ್ ವ್ಯೂಯಿಂಗ್ ಗ್ಯಾಲರಿ ನಿರ್ಮಾಣ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ನೆಹರೂ ತಾಯಾಲಯದಲ್ಲಿ ಚಂದ್ರಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.