June 27, 2026
Saturday, June 27, 2026
spot_img

ಕೆಲಸಕ್ಕೆ ಹೋಗುವಾಗ ಮೇಕಪ್‌ ಮಾಡಿಕೊಂಡು ಹೋಗ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಕೊಂದ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೆನ್ನಾಗಿ ಮೇಕಪ್‌ ಮಾಡಿಕೊಂಡು, ಒಳ್ಳೊಳ್ಳೆ ಬಟ್ಟೆ ಹಾಕಿಕೊಂಡು ಆಫೀಸ್‌ಗೆ ಹೋಗ್ತಾಳೆ, ಅಲ್ಲಿ ಯಾರನ್ನೋ ಇಷ್ಟಪಡ್ತಿದ್ದಾಳೆ ಎಂದು ತಿಳಿದುಕೊಂಡು ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಂದ ಘಟನೆ ಬೆಂಗಳೂರಿನ ಸೋಮನಹಳ್ಳಿಯಲ್ಲಿ ನಡೆದಿದೆ.

38 ವರ್ಷದ ಭಾಗ್ಯ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಪ್ರತೀ ಮಹಿಳೆಯೂ ತಮ್ಮನ್ನು ತಾವು ಸಿಂಗರಿಸಿಕೊಳ್ಳೋದು ಮಾಮೂಲಿ. ಆದರೆ ಪತಿ ಮಹದೇವ್‌ಗೆ ಈ ವಿಷಯ ಸಮಾಧಾನ ನೀಡುತ್ತಿರಲಿಲ್ಲ. ಮೇಕಪ್‌, ಹೊಸ ಹೊಸ ಬಟ್ಟೆ ಹಾಕ್ತಿದ್ದಾರೆ ಅಂದರೆ ಯಾರನ್ನೋ ಇಂಪ್ರೆಸ್‌ ಮಾಡೋದಕ್ಕೆ ಹಾಕ್ತಿದ್ದಾರೆ ಎಂದು ತಿಳಿದುಕೊಂಡಿದ್ದರು.

ಪತ್ನಿ ಫೋನ್‌ನಲ್ಲಿ ಮಾತನಾಡೋದು, ಮೆಸೇಜ್‌ ಮಾಡೋದು ಮಾಡಿದರೆ ಆತನ ಅನುಮಾನ ಇನ್ನೂ ದಟ್ಟವಾಗುತ್ತಿತ್ತು. ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿ ಹಲವು ಬಾರಿ ಜಗಳಗಳು ನಡೆಯುತ್ತಿತ್ತು. ನಿರಂತರ ಕಿರುಕುಳದಿಂದ ಬೇಸತ್ತಿದ್ದ ಭಾಗ್ಯ ತಮ್ಮ ಸಹೋದರಿ ಮನೆಗೆ ಶಿಫ್ಟ್‌ ಆಗಿದ್ದರು. ಪತ್ನಿಯನ್ನು ಕರೆದುಕೊಂಡು ಬರಲು ಬಂದಿದ್ದ ಮಹಾದೇವ್‌ ಆಕೆ ಕೆಲಸಕ್ಕೆ ಹೋಗಬಾರದು, ಮೊಬೈಲ್‌ ಬಳಕೆ ಮಾಡಬಾರದು ಎಂದು ಷರತ್ತು ಹಾಕಿದ್ದ. ಅದಕ್ಕೆ ಭಾಗ್ಯ ಹಾಗೂ ಅವರ ಕುಟುಂಬ ಒಪ್ಪಿಗೆ ನೀಡಿತ್ತು.

ಮನೆಗೆ ಬಂದ ನಂತರ ಮತ್ತೆ ಇದೇ ವಿಷಯಕ್ಕೆ ಜಗಳ ಆರಂಭವಾಗಿದೆ. ಭಾಗ್ಯ ಜೊತೆ ರೂಮಿನ ಬಾಗಿಲು ಹಾಕಿಕೊಂಡ ಮಹಾದೇವ್‌ ಯಾರು ಹೇಳಿದರೂ ಬಾಗಿಲು ತೆಗೆದಿಲ್ಲ. ಅದಾದ ಹದಿನೈದು ನಿಮಿಷಕ್ಕೆ ಭಾಗ್ಯ ಕುತ್ತಿಗೆಗೆ ಚಾಕು ಹಾಕಿ ಸೀಳಿ ಕೊಂದಿದ್ದಾನೆ. ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

19 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 17 ಮತ್ತು 12 ವರ್ಷದ ಇಬ್ಬರು ಪುತ್ರರಿದ್ದಾರೆ. ಭಾಗ್ಯ ಅವರ ಸಹೋದರಿ ನೀಡಿದ ದೂರಿನ ಮೇರೆಗೆ ಮಹದೇವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !