March 18, 2026
Wednesday, March 18, 2026
spot_img

ಗಂಡ ಹೆಂಡತಿ ಜಗಳಕ್ಕೆ ಮೂರನೆಯವರಲ್ಲ! ಅಟ್ಯಾಚ್‌ ಬಾತ್‌ರೂಮ್‌ ಕಾರಣವಂತೆ

ಶಾಂತವಾಗಿರುವ ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಗಂಡ ಹೆಂಡತಿ ನಡುವೆ ಜಗಳಗಳು ಹೆಚ್ಚಾಗುತ್ತಿದೆಯಾ? ಇದು ನಿಮ್ಮ ಮನಸ್ಸಿಗೆ ಸಂಬಂಧ ಪಟ್ಟಿದ್ದು ಇರಬಹುದು. ಹಾಗೆಯೇ ವಾಸ್ತುಗೆ ಸಂಬಂಧಪಟ್ಟಿದ್ದೂ ಇರಬಹುದು.

ಗಂಡ ಹೆಂಡತಿ ಇರುವ ಕೋಣೆಯಲ್ಲಿ ಅಟ್ಯಾಚ್‌ ಬಾತ್‌ರೂಮ್‌ ಇದ್ದೇ ಇರುತ್ತದೆ. ಆದರೆ ಮಂಚ ಯಾವ ದಿಕ್ಕಿನಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ. ಕಣ್ಣುಬಿಟ್ಟರೆ ಬಾತ್‌ರೂಮ್‌ ಕಾಣುವಂತೆ ಮಂಚವನ್ನು ಹಾಕಿಕೊಂಡರೆ ಅದು ನಿಮ್ಮ ಶಾಂತಿಯನ್ನು ಹಾಳುಮಾಡುತ್ತದೆ.

ವಾಸ್ತು ಶಾಸ್ತ್ರದಲ್ಲಿ ಸ್ನಾನಗೃಹವನ್ನು ‘ರಾಹು’ವಿನ ಪ್ರಭಾವಕ್ಕೆ ಒಳಪಟ್ಟ ಸ್ಥಳ ಮತ್ತು ನೀರಿನ ಅಂಶ ಹೆಚ್ಚಾಗಿರುವ ಜಾಗ ಎಂದು ಪರಿಗಣಿಸಲಾಗುತ್ತದೆ. ಮಲಗುವ ಕೋಣೆಯಲ್ಲಿ ಹಾಸಿಗೆಯ ನೇರ ಎದುರಿಗೆ ಸ್ನಾನಗೃಹದ ಬಾಗಿಲು ಇದ್ದರೆ, ಅಲ್ಲಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ನೇರವಾಗಿ ಹಾಸಿಗೆಯ ಮೇಲೆ ಮಲಗುವವರ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಬಾತ್‌ರೂಮ್‌ ಬಾಗಿಲನ್ನು ಸದಾ ತೆಗೆದು ಇಡಬೇಡಿ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ ಹಾಗೆಯೇ ನಕಾರಾತ್ಮಕ ಶಕ್ತಿ ಹೊರಕ್ಕೆ ಬರುತ್ತದೆ.

ಈ ಸಲಹೆ ಪಾಲಿಸಿ

ಮಂಚದ ಡೈರೆಕ್ಷನ್‌ ಬದಲಾಯಿಸಿ, ತಲೆ ಹಾಕುವ ದಿಕ್ಕನ್ನು ಬದಲಾಯಿಸಿ

ಹಾಸಿಗೆ ಮತ್ತು ಸ್ನಾನಗೃಹದ ಬಾಗಿಲು ನೇರ ಮುಖಾಮುಖಿಯಾಗಿದ್ದರೆ, ಸ್ನಾನಗೃಹದ ಬಾಗಿಲಿನ ಮೇಲೆ ಒಂದು ದಪ್ಪನೆಯ ಪರದೆಯನ್ನು ನೇತುಹಾಕಿ. ಇದು ಶಕ್ತಿಯ ಹರಿವನ್ನು ನಿರ್ಬಂಧಿಸಿ ಕೋಣೆಗೆ ಪ್ರವೇಶಿಸದಂತೆ ತಡೆಯುತ್ತದೆ.

ವಾಸ್ತು ತಜ್ಞರ ಸಲಹೆಯಂತೆ, ಸ್ನಾನಗೃಹದ ಬಳಿ ಅಥವಾ ಬಾಗಿಲಿನ ಮೇಲೆ ವಾಸ್ತುಗೆ ಸಂಬಂಧಿಸಿದ ಸಕಾರಾತ್ಮಕ ಚಿಹ್ನೆಗಳನ್ನು ಇರಿಸುವುದು ಕೂಡ ಉತ್ತಮ ಫಲ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !