September 19, 2026
Saturday, September 19, 2026
spot_img

MOTIVATION | ಈ ಐದು ವಿಷಯಗಳನ್ನು ಗ್ರಾಂಟೆಡ್‌ ಆಗಿ ತಗೋಬೇಡಿ, ಥ್ಯಾಂಕ್ಸ್‌ ಹೇಳೋದನ್ನು ಕಲಿಯಿರಿ

ನನ್ನ ಬಳಿ ದೊಡ್ಡ ಕಾರಿಲ್ಲ, ಅಪಾರ್ಟ್‌ಮೆಂಟ್‌ ತಗೊಳಕ್ಕೆ ಆಗ್ತಾ ಇಲ್ಲ, ಈ ವರ್ಷ ಬಾಲಿಗೆ ಟ್ರಿಪ್‌ ಹೋಗೋಕೆ ಆಗಿಲ್ಲ. ಮಕ್ಕಳಿಗೆ ಇನ್ನೂ ಚನಾಗಿರೋ ಸ್ಕೂಲ್‌ಗೆ ಹಾಕ್ಬೇಕಿತ್ತು, ನನ್ನ ಫ್ರೆಂಡ್‌ಗೆ ಒಂದು ಲಕ್ಷ ಸಂಬಳ, ಅವನ ಲೈಫ್‌ ಎಷ್ಟು ಚನಾಗಿರಬಹುದು..

ಗೊಣಗೋಕೆ, ಬೇಜಾರಾಗೋಕೆ ಸಾವಿರ ರೀಸನ್ಸ್‌ ಲೈಫ್‌ ಕೊಟ್ಟಿದೆ ಎಂದು ನೀವು ಅಂದುಕೊಳ್ಳೋದೇ ಆದ್ರೆ ಖುಷಿಯಾಗಿರೋಕೆ, ತೃಪ್ತಿಪಡೋಕೆ ಲೈಫ್‌ ಲಕ್ಷ ವಿಷಯಗಳನ್ನು ಕೊಟ್ಟಿದೆ ಅನ್ನೋದನ್ನು ಹೇಗೆ ಮರೀತೀರಿ. ಇರೋದಕ್ಕೆ ಖುಷಿ ಪಡಿ..

ಈ ಹತ್ತು ವಿಷಯಗಳಿಗೆ ಗ್ರೇಟ್‌ಫುಲ್‌ ಆಗಿ ಇರೋದನ್ನು ಕಲಿಯಿರಿ..

ಬಾಡಿಗೆಯೋ ಸ್ವಂತವೋ ಒಟ್ಟಾರೆ ತಲೆ ಮೇಲೆ ಸೂರಿದ್ರೆ ನೀವು ಲಕ್ಕಿ, ಬೀದಿಯಲ್ಲಿ ಮಲಗೋ ಸಾವಿರ ಜನಕ್ಕೆ ಗುಡಿಸಲಿನ ಆಸೆಯಂತೆ!

ದಪ್ಪವೋ ಸಣ್ಣವೋ ಉದ್ದವೋ ಕುಳ್ಳವೋ ಆರೋಗ್ಯವಾಗಿದ್ದೀರಾ? ದೇಹದ ಎಲ್ಲ ಅಂಗಗಳು ಕೆಲಸ ಮಾಡ್ತಿದ್ಯಾ? ಖುಷಿಪಡಿ. ಆಸ್ಪತ್ರೆಯಲ್ಲಿರೋ ರೋಗಿಗಳಿಗೆ ಮನೆಗೆ ಹೊರಡೋ ಆಸೆಯಂತೆ!

ಗಂಡ ಕೋಪಿಷ್ಠ, ಹೆಂಡತಿಗೆ ಅಹಂ ಜಾಸ್ತಿ, ಮಕ್ಕಳಿಗೆ ಕೊಬ್ಬು, ಅಪ್ಪ-ಅಮ್ಮನಿಗೆ ಅರಳುಮರಳು, ಸ್ನೇಹಿತರಿಗೆ ಸಮಯವೇ ಇಲ್ಲ. ಪರವಾಗಿಲ್ಲ ಬಿಡಿ, ನಿಮ್ಮ ಬಳಿ ಸಂಬಂಧಗಳಿದೆಯಲ್ವಾ? ಅನಾಥಾಶ್ರಮದಲ್ಲಿರೋ ಹುಡುಗನಿಗೆ ಅಪ್ಪನ ಹೆಗಲ ಮೇಲೆ ಕೂರೋ ತವಕವಂತೆ!

ಫೈವ್‌ ಸ್ಟಾರ್‌ ಹೊಟೇಲ್‌ಗೆ ಹೋಗೋಕೆ ದುಡ್ಡಿಲ್ಲ, ಅಬ್ರಾಡ್‌ ಟ್ರಾವೆಲ್‌ ಮಾಡೋಕೆ ಕಾಸಿಲ್ಲ ಅಂತ ಬೇಸರಿಸಿಕೊಳ್ಳಬೇಡಿ. ಬಡವರಿಗೆ ನಾಳೆ ಊಟಕ್ಕೆ ಏನು ಅನ್ನೋ ಭಯ!

ನಮ್ಮಪ್ಪ ನನ್ನನ್ನು ಫಾರೀನ್‌ ಟ್ರಿಪ್‌ ಕಳಿಸ್ತಾ ಇಲ್ಲ, ಫ್ರೆಂಡ್ಸ್‌ ಜತೆ ಟ್ರಿಪ್‌ ಹೋಗೋಕೆ ಹೆಂಡತಿ ಬಿಡ್ತಾ ಇಲ್ಲ ಎಂದು ಕೊರಗಬೇಡಿ. ಎಲ್ಲರಿಗೂ ಎಲ್ಲ ವಿಷಯದಲ್ಲೂ ಫ್ರೀಡಂ ಇರೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !