ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸದ ಒತ್ತಡದಿಂದ ಮಕ್ಕಳು ಮಾಡಿಕೊಳ್ಳೋಕೆ ತೊಂದರೆ ಆಗುತ್ತದೆ ಎಂದು ಕೆಲಸ ಬಿಡುವವರನ್ನು ನೋಡಿದ್ದೇವೆ, ಆದರೆ ಇಲ್ಲೊಂದು ದಂಪತಿ ಕೆಲಸಕ್ಕಾಗಿ ಮಗುವನ್ನೇ ದತ್ತು ನೀಡಿದ್ದಾರೆ.
ಪತಿ ಹ್ಯಾರಿ ಹಾಗೂ ಪತ್ನಿ ಕ್ಯಾಥರೀನ್ ತಮ್ಮ ಮೂರು ತಿಂಗಳ ಮಗುವನ್ನು ದತ್ತು ನೀಡಿದ್ದಾರೆ. ಇಬ್ಬರೂ ಹೈ ಪ್ರೊಫೈಲ್ ಕೆಲಸದಲ್ಲಿದ್ದು ಯಾರೂ ಕೆಲಸ ಬಿಡಲು ತಯಾರಾಗಲಿಲ್ಲ.
ಮೂರು ತಿಂಗಳವರೆಗೆ ಮಗುವನ್ನು ಕ್ಯಾಥರಿನ್ ತಾಯಿ ನೋಡಿಕೊಂಡಿದ್ದರು. ಮೂರು ತಿಂಗಳ ನಂತರ ಅವರು ಊರಿಗೆ ತೆರಳಿದ್ದು, ಮಗು ನೋಡಿಕೊಳ್ಳಲಾರದೆ ದಂಪತಿ ಮಗುವನ್ನು ದತ್ತು ನೀಡಿದ್ದಾರೆ.
ಕೆಲಸ ಬಿಟ್ಟರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಎಂದು ಕ್ಯಾಥರಿನ್ ಪತಿಗೆ ಹೇಳಿದ್ದಾರೆ. ಮಗುವಿಗಿಂತ ಪತ್ನಿ ಮುಖ್ಯ ಎಂದು ಪತಿ ಹೇಳಿದ್ದು, ಮಗುವನ್ನು ದತ್ತು ನೀಡುವ ನಿರ್ಧಾರ ಮಾಡಿದ್ದಾರೆ.
ಬೇರೆ ಯಾರಿಗೋ ಮಗು ಕೊಡುವುದು ಬೇಡ ಎಂದು ಕ್ಯಾಥರೀನ್ ತಾಯಿಯೇ ಮಗುವನ್ನು ದತ್ತು ಪಡೆದಿದ್ದಾರೆ. ಅಜ್ಜಿಯೇ ಮಗುವಿಗೆ ತಾಯಿಯಾಗಿ ಸಾಕುತ್ತಿದ್ದಾರೆ.