ಪತಿ-ಪತ್ನಿ ಮನೆ ಕೆಲಸದ ಹೊರೆಯನ್ನು ಸಮಾನವಾಗಿ ಹಂಚಿಕೊಳ್ಳಬೇಕು: ಬಾಂಬೆ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನ ಸಮಾಜದಲ್ಲಿ ಪತಿ-ಪತ್ನಿ ಮನೆಯ ಜವಾಬ್ದಾರಿಯನ್ನು ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ (Bombay High Court) ಹೇಳಿದೆ.

ಸೆಪ್ಟೆಂಬರ್ 6 ರಂದು ತನ್ನ 13 ವರ್ಷದ ವಿವಾಹವನ್ನು ವಿಸರ್ಜಿಸುವಂತೆ ಕೋರಿ (ವಿಚ್ಛೇದನ ಕೋರಿ) 35 ವರ್ಷದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ (Justices) ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠ, ಮಹಿಳೆ ಮತ್ತು ಪುರುಷ ಇಬ್ಬರು ಉದ್ಯೋಗದಲ್ಲಿದ್ದಾರೆ, ಆದ್ದರಿಂದ ಮನೆಯ ಎಲ್ಲಾ ಕೆಲಸಗಳನ್ನು ಹೆಂಡತಿಯೇ ಮಾಡಬೇಕೆಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಇದು ಪುರುಷನ ಹಿಂಜರಿಕೆ ಮನೋಭಾವವನ್ನೂ ಸೂಚಿಸುತ್ತದೆ. ಆಧುನಿಕ ಸಮಾಜದಲ್ಲಿ ಮನೆ ಜವಾಬ್ದಾರಿ ಹಾಗೂ ಕುಟುಂಬದ ಭಾರವನ್ನು ಪತಿ-ಪತ್ನಿ ಇಬ್ಬರು ಸಮಾನವಾಗಿ ಹೊರಬೇಕು. ಈ ಮೂಲಕ ಮಹಿಳೆಯೇ ಮನೆಗೆಲಸದ ಜವಾಬ್ದಾರಿ ಹೊರಬೇಕು ಎಂದು ನಿರೀಕ್ಷಿಸುವ ಪ್ರಾಚೀನ ಕಾಲದ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದುಹೇಳಿದೆ.

2018ರ ಮಾರ್ಚ್‌ ತಿಂಗಳಲ್ಲಿ ಕೌಟುಂಬಿಕ ನ್ಯಾಯಾಲಯದ (Family Court) ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

2010ರಲ್ಲಿ ವಿವಾಹವಾಗಿದ್ದರು (Marriage), ತನ್ನ ಹೆಂಡತಿ ಯಾವಾಗಲೂ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ಇರ್ತಾಳೆ, ಮನೆಕೆಲಸವನ್ನೇ ಮಾಡೋದಿಲ್ಲ ಎಂದು ಅರ್ಜಿದಾರ ಪತಿ ಮನವಿಯಲ್ಲಿ ವಾದಿಸಿದ್ದ.

ಆದ್ರೆ ಮಹಿಳೆ ನಾನು ಕಚೇರಿಯಿಂದ ಬರುತ್ತಿದ್ದಂತೆ ಮನೆಯ ಎಲ್ಲಾ ಕೆಲಸಗಳನ್ನ ಮಾಡಲು ಪತಿ ಒತ್ತಾಯಿಸುತ್ತಿದ್ದ, ಈ ಬಗ್ಗೆ ನನ್ನ ಕುಟುಂಬಸ್ಥರಿಗೆ ಹೇಳಿದಾಗ ಅವರಿಂದಲೂ ನಿಂಧನೆ ಎದುರಿಸಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಲ್ಲದೇ ವಿಚ್ಛೇದಿತ ಪತಿ ತನಗೆ ಹಲವು ಬಾರಿ ದೈಹಿಕ ಕಿರುಕುಳವನ್ನೂ ನೀಡಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here