ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲ ವರ್ಷಗಳಿಂದ ಡಿವೋರ್ಸ್ ಸಂಖ್ಯೆ ಹೆಚ್ಚುತ್ತಿದೆ. ಕೆಲವರಿಗೆ ಅದರಿಂದ ಬೇಸರ ಆಗುವ ಕ್ಷಣಗಳು ಇರುತ್ತೆ. ಆದ್ರೆ ಇಲ್ಲಿ ಓರ್ವ ವಕೀಲರು ಕರೆ ಮಾಡಿ ಡಿವೋರ್ಸ್ ಫೈನಲ್ ಆಗಿದೆ. ಇನ್ನು ಸ್ವತಂತ್ರ ಎಂದು ಸಂದೇಶ ನೀಡಿದ್ದಕ್ಕೆ ಹಾಲಿನಿಂದ ಸ್ನಾನ ಮಾಡಿದ್ದಾನೆ. ಇಷ್ಟೇ ಅಲ್ಲ ನಾನು ಇನ್ನು ಸಂಪೂರ್ಣ ಸ್ವತಂತ್ರ ಎಂದು ಕುಣಿದಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.
ನಲ್ಬಾರಿ ಜಿಲ್ಲೆಯ ಮನಿಕ್ ಅಲಿಗೆ ಡಿವೋರ್ಸ್ ಸಿಕ್ಕಿದೆ. ಪತ್ನಿಯಿಂದ ಮುಕ್ತಿ ಸಿಕ್ಕದ ಖುಷಿಯಲ್ಲಿ ಬರೋಬ್ಬರಿ 40 ಲೀಟರ್ ಹಾಲಿನಿಂದ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ. ತನ್ನ ಸಂಭ್ರಮವನ್ನು ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈತನ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಮನಿಕ್ ಅಲಿ ಮದುವೆಯಾಗಿ ಕೆಲ ವರ್ಷಗಳು ಕಳೆದಿದೆ. ಇವರಿಗೆ ಒಬ್ಬಳು ಮಗಳಿದ್ದಾಳೆ. ಆದರೆ ಮನಿಕ್ ಆಲಿ ಪತ್ನಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಹಲವು ಬಾರಿ ಲವರ್ ಜೊತೆ ಓಡಿ ಹೋಗಿದ್ದಳು. ಈ ವೇಳೆ ತನ್ನ ಮಗಳ ಭವಿಷ್ಯ ನೆನೆದು ಮತ್ತೆ ಸಂಧಾನ ಮಾಡಿ ಪತ್ನಿಯನ್ನು ಕರೆ ತರಲಾಗಿತ್ತು. ಆದರೆ ಪದೇ ಪದೇ ಮನಿಕ್ ಅಲಿಗೆ ಟಾರ್ಚರ್ ನೀಡಿ ಲವರ್ ಜೊತೆ ಓಡಿ ಹೋಗುತ್ತಿದ್ದ ಪತ್ನಿ ನಡೆಯಿಂದ ಮನಿಕ್ ಆಲಿ ಕೂಡ ಬೇಸತ್ತು ಹೋಗಿದ್ದ. ಪತ್ನಿಯನ್ನು ಪ್ರಶ್ನಿಸಿದರೆ ಕಿರುಕುಳ ನೀಡುತ್ತಿದ್ದಳು ಎಂದು ಮನಿಕ್ ಆಲಿ ಹೇಳಿದ್ದಾರೆ.
ಮಗಳ ಭವಿಷ್ಯದ ದೃಷ್ಟಿಯಿಂದ ಡಿವೋರ್ಸ್ ಉತ್ತಮ ನಿರ್ಧಾರವಲ್ಲ. ಆದರೆ ಪತ್ನಿಯ ಕಿರುಕುಳ ಹೆಚ್ಚಾಗುತ್ತಿದ್ದಂತೆ ತನ್ನಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದ. ಲವರ್ ಜೊತೆ ಓಡಿ ಹೋದ ಪತ್ನಿಗೆ ಮದುವೆಯಾಗಲು ಮೊದಲ ಗಂಡನಿಗೆ ಡಿವೋರ್ಸ್ ನೀಡಿಲ್ಲದ ಕಾರಣ ಕಾನೂನು ಅಡೆ ತಡೆ ಎದುರಾಗಿದೆ. ಇತ್ತ ಮನಿಕ್ ಅಲಿಗೂ ಡಿವೋರ್ಸ್ ಬೇಕಾಗಿತ್ತು. ಇವರಿಬ್ಬರ ಡಿವೋರ್ಸ ಅರ್ಜಿ ಕೊರ್ಟ್ ಮೆಟ್ಟಿಲೇರಿದೆ.
ಹಲುವ ವಿಚಾರಣೆ, ಸುದೀರ್ಘ ದಿನಗಳ ಬಳಿಕ ವಕೀಲ ಮನಿಕ್ ಆಲಿಗೆ ಕರೆ ಮಾಡಿದ್ದಾರೆ. ನಿಮ್ಮ ವಿಚ್ಛೇದನ ಕ್ಲಿಯರ್ ಆಗಿದೆ. ಕೋರ್ಟ್ ವಿಚ್ಛೇದನಕ್ಕೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದ್ದರೆ. ಈ ಮಾಹಿತಿ ಕೇಳುತ್ತಿದ್ದಂತೆ ಮನಿಕ್ ಆಲಿ ಖುಷಿ ಡಬಲ್ ಆಗಿದೆ. ಏನು ಮಾಡಬೇಕು ಅನ್ನೋದೆ ತೋಚದಾಗಿದೆ. ನಾನಿನ್ನು ಫ್ರೀ ಎಂದು ಕುಣಿದಾಡಿದ್ದಾನೆ. ಇದೇ ಖುಷಿಯಲ್ಲಿ 40 ಲೀಟರ್ ಹಾಲು ತಂದು ಸ್ನಾನ ಮಾಡಿದ್ದಾನೆ.