ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪತ್ನಿಯನ್ನು (Wife) ಖುಷಿ ಪಡಿಸಲು ಹೋಗಿ ಪತಿ ಪಜೀತಿಗೆ ಒಳಗಾದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಪ್ರೀತಿಯಿಂದ ವ್ಯಕ್ತಿಯು ತನ್ನ ಪತ್ನಿಯನ್ನು ಬಾಲಿವುಡ್ ನಟಿ ಕಿಯಾರಾ ಅಡ್ವಾನಿಗೆ (Kiara Advani) ಹೋಲಿಸಿದ್ದು, ಇದಕ್ಕೆ ಪತ್ನಿ ಕೋಪಗೊಂಡು ಊಟ ನಿರಾಕರಿಸಿದ್ದಾಳೆ.
52 ಸೆಕೆಂಡುಗಳ ವೀಡಿಯೋ ಇದಾಗಿದ್ದು, ಕೋಪಗೊಂಡ ಪತ್ನಿ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ.ಕೋಪಬೇಡ, ನನ್ನನ್ನು ಕ್ಷಮಿಸು, ಅವಳು ನಟಿ. ನಾನು ಅವಳನ್ನು ಮದುವೆ ಆಗುತ್ತೇನೆ ಎಂದು ನೀನು ಕೋಪಗೊಳ್ಳುತ್ತೀದ್ದೀಯಾ ಎಂದು ಆತ ಕೇಳುತ್ತಾನೆ.ಅದಕ್ಕೆ ಆತನ ಪತ್ನಿ ಪ್ರತಿಕ್ರಿಯಿಸಿ, ಹೋಗಿ ಅವಳನ್ನೇ ಮದುವೆಯಾಗು, ನೀನು ಇಲ್ಲಿ ಉಳಿಯಬೇಕಾಗಿಲ್ಲ ಎಂದು ಉತ್ತರಿಸುತ್ತಾಳೆ. ಅದಕ್ಕೆ ಪತಿ, ಹೌದು, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ ಎಂದು ವ್ಯಂಗ್ಯವಾಡುತ್ತಾನೆ. ಅದಕ್ಕೆ ಪತ್ನಿ, ಇಲ್ಲ, ಇಲ್ಲ, ಅವಳು ನಿನ್ನನ್ನು ಮದುವೆಯಾಗುತ್ತಾಳೆ. ಎಲ್ಲಾ ಹುಡುಗಿಯರು ನಿನ್ನನ್ನು ಮದುವೆಯಾಗಲು ಸಾಯುತ್ತಿದ್ದಾರೆ ಎಂದು ಉತ್ತರಿಸುತ್ತಾಳೆ.
ನಟಿಯಾಗಿ ಆಕೆಯನ್ನು ಇಷ್ಟಪಡುತ್ತೇನೆ. ನಾನು ಯಾವುದೇ ನಟಿಯನ್ನು ಇಷ್ಟಪಡಬಾರದೇ ಎಂದು ಕೇಳುತ್ತಾನೆ. ಅದಕ್ಕೆ ಪತ್ನಿಯು, ಹಾಗಾದರೆ ನನ್ನನ್ನು ಕಿಯಾರಾ ಅಡ್ವಾಣಿ ಜೊತೆಗೆ ಯಾಕೆ ಹೋಲಿಸಿದ್ದೀರಿ, ನಾನು ನಟಿಯೇ ಎಂದು ಎಂದು ವ್ಯಂಗ್ಯವಾಡುತ್ತಾಳೆ.ಅವಳು ಚೆನ್ನಾಗಿ ನಟಿಸುತ್ತಾಳೆ ಎಂದು ತನ್ನ ಹೇಳಿಕೆಗೆ ಸಮರ್ಥನೆಯನ್ನು ನೀಡಲು ಬಂದ ಪತಿಗೆ ಪತ್ನಿಯು ಇಲ್ಲಿಂದ ಹೊರಡಿ, ಇಂದು ನಿಮಗೆ ಊಟ ಸಿಗುವುದಿಲ್ಲ ಎಂದು ಹೇಳುತ್ತಾಳೆ.
When husband compares his wife with @advani_kiara! 😂#KiaraAdvani #viral #cutecouple pic.twitter.com/JV99Tw6pPg
— Praveen 🇮🇳 (@PraveenSarraf_) February 1, 2023
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ.