Monday, October 27, 2025

ಪತ್ನಿ ಜೊತೆ ಜಗಳ, ಕೋಪದಿಂದ ಅವಳಿ ಮಕ್ಕಳನ್ನು ಕತ್ತುಸೀಳಿ ಕೊಂದ ಗಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯ ಬುಲ್ದಾನಾದಲ್ಲಿ ಪತ್ನಿ ಜೊತೆ ಜಗಳ ಮಾಡಿಕೊಂಡು ವ್ಯಕ್ತಿಯೊಬ್ಬ ತನ್ನ ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಅವಳಿ ಮಕ್ಕಳನ್ನು ಕೊಂದ ವ್ಯಕ್ತಿಯನ್ನು ರಾಹುಲ್‌ ಚವಾಣ್‌ ಎಂದು ಗುರುತಿಸಲಾಗಿದೆ. ಗಂಡ-ಹೆಂಡತಿ ನಡುವೆ ಗಲಾಟೆ ಆಗುತ್ತಿದ್ದ ಸಮಯದಲ್ಲಿಯೇ ಸಿಟ್ಟಿಗೆದ್ದ ಹೆಂಡತಿ ಇಡೀ ಕುಟುಂಬವನ್ನೇ ತೊರೆದು ತವರುಮನೆಗೆ ಸೇರಿಕೊಂಡಿದ್ದಳು. ಹೆಂಡತಿ ತನ್ನ ಬಿಟ್ಟು ತವರು ಮನೆಗೆ ಹೋದ ಸಿಟ್ಟಿನಲ್ಲಿಯೇ ಆ ವ್ಯಕ್ತಿ ತನ್ನ ಎರಡು ವರ್ಷದ ಅವಳಿ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸ್‌ ಠಾಣೆಗೆ ನಡೆದುಕೊಂಡು ಹೋಗಿ ತಾನು ಆ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ವಾಶಿಮ್ ಜಿಲ್ಲೆಯ ನಿವಾಸಿ. ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ದಂಪತಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಜಗಳದ ಸಮಯದಲ್ಲಿ, ರಾಹುಲ್‌ ಚವಾಣ್‌ನ ಪತ್ನಿ ಗಂಡನನ್ನು ಬಿಟ್ಟು ತವರು ಮನಗೆ ಹೋಗಲು ನಿರ್ಧಾರ ಮಾಡಿದ್ದಾಳೆ. ಆದರೆ, ರಾಹುಲ್‌ ಚವಾಣ್‌ ಮಾತ್ರ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣ ಮಾಡಿದ್ದನು . ಅತಿಯಾದ ಸಿಟ್ಟಿನಲ್ಲಿದ್ದ ರಾಹುಲ್‌ ಚವಾಣ್‌, ಇಬ್ಬರು ಹೆಣ್ಣುಮಕ್ಕಳನ್ನು ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಘಟನೆಯ ನಂತರ, ಚವಾಣ್ ನೇರವಾಗಿ ವಾಶಿಮ್ ಪೊಲೀಸ್ ಠಾಣೆಗೆ ಕಾರಿನಲ್ಲಿ ಹೋಗಿದ್ದು, ಅವರ ಎದುರಲ್ಲಿ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ತಪ್ಪೊಪ್ಪಿಗೆಯ ನಂತರ, ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಕ್ಕಳ ಶವಗಳನ್ನು ವಶಪಡಿಸಿಕೊಂಡಿದೆ.

ಪ್ರಾಥಮಿಕ ಶೋಧನೆಗಳ ಪ್ರಕಾರ ಶವಗಳು ಭಾಗಶಃ ಸುಟ್ಟುಹೋಗಿವೆ ಎಂದು ಸೂಚಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಕೊಲೆಗಳ ನಂತರ ಚವಾಣ್ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಆದರೆ, ಪೊಲೀಸ್ ಅಧಿಕಾರಿಗಳು ತನಿಖೆಯ ಈ ಅಂಶವನ್ನು ಇನ್ನೂ ದೃಢಪಡಿಸಿಲ್ಲ. ಸಾವಿಗೆ ನಿಖರವಾದ ಕಾರಣ ಮತ್ತು ಬಾಲಕಿರಯನ್ನು ಮರಣೋತ್ತರವಾಗಿ ಸುಟ್ಟುಹಾಕಲಾಗಿದೆಯೇ ಎಂದು ನಿರ್ಧರಿಸಲು ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

error: Content is protected !!