ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಮಹಿಳೆಯರು ಟೊಮ್ಯಾಟೊ ರಸಂ, ಟೊಮ್ಯಾಟೊ ಗೊಜ್ಜು, ಟೊಮ್ಯಾಟೊ ಬಾತ್ ಮಾಡೋದನ್ನೇ ನಿಲ್ಲಿಸಿದ್ದಾರೆ.
ಟೊಮ್ಯಾಟೊ ಕಾಯೋಕೆ ರೈತರು ಕಷ್ಟಪಡ್ತಿದ್ರೆ, ಇತ್ತ ಕಳ್ಳರು ಚಿನ್ನ ಬೆಳ್ಳಿ ಬಿಟ್ಟು ಟೊಮ್ಯಾಟೊಗೆ ಸ್ಕೆಚ್ ಹಾಕಿದ್ದಾರೆ. ಟೊಮ್ಯಾಟೊ ಅವಾಂತರಗಳು ಒಂದೆರಡದಲ್ಲ! ಇದೀಗ ಒಂದು ಸಂಸಾರವೇ ಟೊಮ್ಯಾಟೊ ಕಡೆಯಿಂದ ಹಾಳಾಗಿಹೋಗಿದೆ.
ಮಧ್ಯಪ್ರದೇಶದ ಶಹದೋಲ್‌ನಲ್ಲಿ ಪತ್ನಿ ಪರ್ಮಿಶನ್ ಇಲ್ಲದೆ ಅಡುಗೆಗೆ ಪತಿ ಟೊಮ್ಯಾಟೊ ಬಳಕೆ ಮಾಡಿದ್ದು, ಕೋಪಗೊಂಡ ಪತ್ನಿ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ.
ಸಂಜೀವ್ ಬರ್ಮನ್ ಎಂಬಾತ ಎರಡು ಟೊಮ್ಯಾಟೊ ಬಳಸಿ ಅಡುಗೆ ಮಾಡಿದ್ದಾರೆ.ನನ್ನನ್ನು ಕೇಳದೇ ಟೊಮ್ಯಾಟೊ ಬಳಸಿದ್ದು ಯಾಕೆ ಎಂದು ಪತ್ನಿ ಜಗಳ ಮಾಡಿದ್ದಾರೆ. ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿಯನ್ನು ಹುಡುಕಿ ಹುಡುಕಿ ಸಾಕಾದ ಪತಿ ಪೊಲೀಸರ ಮೊರೆ ಹೋಗಿದ್ದು, ಮೂರು ದಿನದಿಂದ ಪತ್ನಿ ಮಗಳ ಜೊತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಆದಷ್ಟು ಬೇಗ ಅವರನ್ನು ಹುಡುಕಿ ಮನೆಗೆ ಕಳುಹಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.