ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಹೈದರಾಬಾದ್ ಮೂಲದ ಡೆಂಟಲ್ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ನಡೆದಿದೆ.
ಟೆಕ್ಸಾಸ್‌ನ ಡಲ್ಲಾಸ್ ಬಳಿ ಈ ಘಟನೆ ನಡೆದಿದೆ. ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡೆಂಟಲ್ ಸರ್ಜರಿ ಪದವಿ ಓದುತ್ತಿದ್ದ ಹೈದರಾಬಾದ್ ಮೂಲದ ಚಂದ್ರಶೇಕರ್ ಪೋಲೆ ಹತ್ಯೆಯಾಗಿದ್ದಾನೆ. ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಚಂದ್ರಶೇಕರ್ ಹತ್ಯೆಯಾಗಿದ್ದಾನೆ.
ಚಂದ್ರಶೇಖರ್ ಪೋಲೆ 2023ರಿಂದ ಅಮೆರಿಕದ ಟೆಕ್ಸಾಸ್‌ನಲ್ಲಿ ಡೆಂಟಲ್ ಸರ್ಜರಿ ಪದವಿ ಓದುತ್ತಿದ್ದರು. 6 ತಿಂಗಳ ಹಿಂದೆ ಡೆಂಟಲ್ ಪದವಿ ಪೂರ್ಣಗೊಂಡಿತ್ತು. ಇದರ ನಡುವೆ ಗ್ಯಾಸ್ ಸ್ಟೇಶನ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದ ಚಂದ್ರಶೇಖರ್ ಅಮೆರಿಕದಲ್ಲಿ ಡೆಂಟಲ್ ಸರ್ಜನ್ ಆಗಿ ಕೆಲಸ ಹುಡುಕುತ್ತಿದ್ದರು. ಇದರ ನಡುವೆ ಹತ್ಯೆಯಾಗಿದ್ದಾನೆ.
ಅಮೆರಿಕ ಮಾಧ್ಯಮಗಳ ಪ್ರಕಾರ ಆಫ್ರಿಕಾ-ಅಮೆರಿಕನ್ ಮೂಲದ ವ್ಯಕ್ತಿಯಿಂದ ಗುಂಡಿನ ದಾಳಿಯಾಗಿದೆ. ಚಂದ್ರಶೇಕರ್ ಪೋಲೆ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ವರದಿಯಾಗಿದೆ. ಗ್ಯಾಸ್ ಸ್ಟೇಶನ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಈ ಗುಂಡಿನ ದಾಳಿಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಚಂದ್ರಶೇಖರ್ ಪೋಲೆ ಪೋಷಕರು ಅಸ್ವಸ್ಥಗೊಂಡಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದೆ. ಸಾಲ ಮಾಡಿ ಡೆಂಟಲ್ ಸರ್ಜರ್ ಓದಲು ಅಮೆರಿಕಾಗೆ ಕಳುಹಿಸಲಾಗಿತ್ತು. ಅಮೆರಿಕದಲ್ಲಿ ಓದಿ ಡೆಂಟಲ್ ಸರ್ಜನ್ ಆಗಿ ಸೇವೆ ಸಲ್ಲಿಸಲು ಚಂದ್ರಶೇಖರ್ ಭಾರಿ ಉತ್ಸುಕನಾಗಿದ್ದ. ಉತ್ತಮ ಕರಿಯರ್ ರೂಪಿಸಿಕೊಳ್ಳಲು ಅಮೆರಿಕಗೆ ತೆರಳಿದ್ದ. ಯಾರನ್ನೂ ನೋಯಿಸಿದ ನಮ್ಮ ಮಗನ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ಪೋಷಕರು ಕಣ್ಮೀರಿಟ್ಟಿದ್ದಾರೆ. ಮಗನ ಮೃತದೇಹ ಭಾರತಕ್ಕೆ ತರಲು ಸರ್ಕಾರದ ಬಳಿ ನೆರವು ಕೇಳಿದ್ದಾರೆ.