ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಎಲ್ಲೋರಾ ಗುಹೆಗಳು ಶೀಘ್ರದಲ್ಲೇ ಹೈಡ್ರಾಲಿಕ್ ಲಿಫ್ಟ್ ಹೊಂದುವುದರೊಂದಿಗೆ ಯುನೆಸ್ಕೊ ಜಾಗತಿಕ ಪಾರಂಪರಿಕ ತಾಣ ಪಟ್ಟಿಯಲ್ಲಿರುವ ದೇಶದ ಮೊದಲ ಸ್ಮಾರಕ ಎಂಬ ಹಿರಿಮೆಗೆ ಪಾತ್ರವಾಗಲಿವೆ ಎಂದು ಭಾರತೀಯ ಪುರಾತತ್ತ್ವ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಔರಂಗಾಬಾದ್ ನಗರದಿಂದ 30 ಕಿಮೀ ದೂರದಲ್ಲಿರುವ ಎಲ್ಲೋರ ಜಗತ್ತಿನಲ್ಲಿಯೇ ಅತಿದೊಡ್ಡ ಬಂಡೆಯಿಂದ ನಿರ್ಮಿಸಲ್ಪಟ್ಟಿರುವ ದೇವಾಲಯಗಳ ಸಂಕೀರ್ಣಗಳಲ್ಲಿ ಒಂದಾಗಿದೆ. ಗುಹೆಯು ಹಿಂದೂ, ಬೌದ್ಧ ಮತ್ತು ಜೈನ ಶಿಲ್ಪಗಳನ್ನು ಹೊಂದಿದ್ದು, ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರದೇಶವಾಗಿದೆ.
500 ಮೀಟರ್‌ಗಳ ವಿಸ್ತಾರವಾಗಿರುವ ಎಲ್ಲೋರಾ ಗುಹೆಗಳನ್ನು ಪ್ರವಾಸಿ ಸ್ನೇಹಿಯಾಗಿಸಲು ಎಎಸ್‌ಐ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಈ ಯೋಜನೆಗಳು ಮಂಜೂರಾಗುವ ಇಲ್ಲವೆ ಕಾರ್ಯಗತವಾಗುವ ಪ್ರಕ್ರಿಯೆಯಲ್ಲಿವೆ ಎಂದು ಔರಂಗಾ ಬಾದ್ ವೃತ್ತದ ಅಧೀಕ್ಷಕ ಪುರಾತತ್ತ್ವ ಶಾಸ್ತ್ರಜ್ಞ ಮಿಲನ್ ಕುಮಾರ್ ತಿಳಿಸಿದ್ದಾರೆ. ಗುಹೆ ಮೆಟ್ಟಿಲು ಮತ್ತು ಗಾಲಿ ಕುರ್ಚಿಗಳ ಸೌಲಭ್ಯವನ್ನು ಹೊಂದಿದೆಯಾದರೂ, ಎಎಸ್‌ಐ ಗುಹೆಯ ಎರಡೂ ಬದಿಗಳಲ್ಲಿ ಸಣ್ಣ ಲಿಫ್ಟ್‌ಗಳನ್ನು ಅಳವಡಿಸಲು ಪ್ರಸ್ತಾಪಿಸಿದೆ ಎಂದಿದ್ದಾರೆ.