ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತಕಳ್ಳತನ ವಿಚಾರವಾಗಿ ಮತ್ತೆ ಕೇಂದ್ರ ಸರ್ಕಾರ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತಕಳ್ಳತನದ ಹೈಡ್ರೋಜನ್ ಬಾಂಬ್ ಬರುತ್ತಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ INDIA ಮಿತ್ರಕೂಟ ನಡೆಸುತ್ತಿರುವ ಮತದಾರರ ಹಕ್ಕುಗಳ ಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಶೀಘ್ರದಲ್ಲೇ’ದೊಡ್ಡ ವಿಷಯವನ್ನು ಬಹಿರಂಗಪಡಿಸುವುದಾಗಿ’ ಹೇಳಿದರು.
ಮಹಾದೇವಪುರದಲ್ಲಿ ಮತ ಕಳ್ಳತನದ ಸತ್ಯವನ್ನು ನಾವು ಬಹಿರಂಗಪಡಿಸುವ ಮೂಲಕ ನಾವು ಪರಮಾಣು ಬಾಂಬ್ ಅನ್ನು ಹಾಕಿದ್ದೇವು. ಆದರೆ, ಈಗ ಅದಕ್ಕಿಂತಲೂ ದೊಡ್ಡದಾದ ಹೈಡ್ರೋಜನ್ ಬಾಂಬ್ ಬರಲಿದೆ. ಹೈಡ್ರೋಜನ್ ಬಾಂಬ್ ನಂತರ, ಮೋದಿ ಜಿ ಈ ದೇಶಕ್ಕೆ ತಮ್ಮ ಮುಖವನ್ನು ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಬಿಹಾರದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಮತದಾರರ ಹಕ್ಕುಗಳ ಯಾತ್ರೆಯ ಇಂದು ಕೊನೆಯ ದಿನ. ಈ ಯಾತ್ರೆಯನ್ನು ಆಗಸ್ಟ್ 17 ರಂದು ಎಸ್ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಮತ್ತು ಬಿಹಾರದ ಮತ ಕಳ್ಳತನದ ವಿರುದ್ಧ ಪ್ರಾರಂಭಿಸಲಾಗಿತ್ತು.