ಹೊಸದಿಗಂತ ಡಿಜಿಟಲ್ ಡೆಸ್ಕ್:
COVID-19 ಸಾಂಕ್ರಾಮಿಕ ರೋಗದಿಂದ ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಅದರಲ್ಲೂ ಮಕ್ಕಳ ಆರೋಗ್ಯದಲ್ಲಿ ಬಹಳಷ್ಟು ಕಾಳಜಿ ಮುಖ್ಯ ಹಾಗಾಗಿಯೇ ಇದನ್ನು ಉತ್ತಮ ರೀತಿಯಲ್ಲಿ ಉತ್ತೇಜಿಸಲು ಡೆಟಾಲ್ ಬನೇಗಾ ಸ್ವಸ್ತ್ ಇಂಡಿಯಾ ಅಪೋಲೋ ಆಸ್ಪತ್ರೆಗಳ ಜೊತೆಗೆ ಆಂಧ್ರಪ್ರದೇಶದ ಅರಗೊಂಡದಲ್ಲಿ ಒಂದು ರೀತಿಯ ಹೈಜೀನ್ ಪ್ಲೇ ಪಾರ್ಕ್ ಅನ್ನು ನಿರ್ಮಿಸಿದೆ.
ಡೆಟ್ಟಾಲ್ ಹೈಜೀನ್ ಪ್ಲೇ ಪಾರ್ಕ್ ತನ್ನ ನೈರ್ಮಲ್ಯ ವಿಷಯವನ್ನು ಸರಳವಾಗಿ ಮತ್ತು ಮೋಜಿನ ಆಟಗಳ ಮೂಲಕ ಮಕ್ಕಳಿಗೆ ತಿಳಿಸಲು ರೂಪಿಸಲಾಗಿದೆ. ‘ನೈರ್ಮಲ್ಯ’ ಮುಖ್ಯ ವಿಷಯವಾಗಿದ್ದು, ಎಲ್ಲಾ ವಯಸ್ಸಿನ ಮಕ್ಕಳಿಗಾಗಿ ಆಟದ ಉದ್ಯಾನವನವನ್ನು ರಚಿಸಲಾಗಿದೆ ಇಲ್ಲಿ ಹಗ್ಗ, ಮರ ಮತ್ತು ವಿಷರಹಿತ ಬಣ್ಣಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗಿದೆ.