ನಾನೂ ಶ್ರೀರಾಮನ ಭಕ್ತ, ಪ್ರತಿನಿತ್ಯ ರಾಮಕೋಟಿ ಬರೆಯುತ್ತೇನೆ: ಸಚಿವ ಮುನಿಯಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಹೋಗದಿರಲು ನಿರ್ಧರಿಸಿದ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ವಾಗ್ವಾದ ಮುಂದುವರೆಡಿದ್ದು, ಇದರ ನಡುವೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮ ನಾಮ ಜಪ ಬರೆಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಕಾಂಗ್ರೆಸ್ ನಾಯಕರು ರಾಮನ ವಿರೋಧಿಗಳು ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದ ವೇಳೆಯೇ ಕಾಂಗ್ರೆಸ್ ಸಚಿವರ ಈ ವಿಡಿಯೋ ಕಾಂಗ್ರೆಸ್ ನಾಯಕರಲ್ಲಿಯೂ ರಾಮ ಭಕ್ತರಿದ್ದಾರೆ ಎಂಬ ಸಂದೇಶ ಸಾರಿದಂತಿತ್ತು.

ಇದೀಗ ವಿಮಾನದಲ್ಲಿ ರಾಮ ನಾಮ ಜಪ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಕೆ.ಹೆಚ್.ಮುನಿಯಪ್ಪ, ನಾನೂ ರಾಮನ ಭಕ್ತ. 20 ವರ್ಷಗಳಿಂದ ರಾಮ ಕೋಟಿ ಬರೆಯುತಿದ್ದೇನೆ ಎಂದು ಹೇಳಿದ್ದಾರೆ.

ನಾನೂ ಶ್ರೀರಾಮನ ಭಕ್ತ. ಪ್ರತಿನಿತ್ಯ ರಾಮಕೋಟಿ ಬರೆಯುತ್ತೇನೆ. ನಾವು ಭಕ್ತಿಯನ್ನು ತೋರ್ಪಡಿಕೆ ಮಾಡಲ್ಲ. ಇದು ನಮ್ಮ ನಿತ್ಯಪೂಜೆ. ನಿತ್ಯಪೂಜೆ ಮಾಡೋರು ಅಲ್ಲಿಗೆ ಹೇಗಬೇಕು ಎಂದಿಲ್ಲ. ಬಿಜೆಪಿಯವರು ರಾಜಕೀಯಕ್ಕೆ ಈ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ದೇವರ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ನ ಪತಿಯೊಬ್ಬ ಹಿಂದುವೂ ರಾಮ ಭಕ್ತನೇ ಅದರಲ್ಲಿ ಎರಡು ಮಾತಿಲ್ಲ. ಭಕ್ತಿ ಎನ್ನುವುದು ತೋರ್ಪಡಿಕೆಯಲ್ಲ. ತೋರ್ಪಡಿಕೆಯೂ ಆಗಬಾರದು. ಅದು ನಮ್ಮೊಳಗೆ ಇರಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!