ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನನ್ನ ಎರಡು ಬಾರಿ ನೀವು ಗೆಲ್ಲಿಸಿದ್ದೀರಿ, ನಿಮ್ಮ ಋಣ ತೀರಿಸುವುದೇ ನನ್ನ ಮುಂದಿನ ಜೀವನದ ಗುರಿ ಎಂದು ಸಚಿವ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿ, ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದು ಹೇಳಿದ್ದಾರೆ.
ಚನ್ನಪಟ್ಟಣ ಮತದಾನದ ಹಂತದಲ್ಲಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. ಸಂಜೆವರೆಗೂ ಐದು ಜಿಪಂ ವ್ಯಾಪ್ತಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಾಗುತ್ತಿದೆ. ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಹೆಚ್‌ಡಿಕೆ ಭಾವುಕ ಭಾಷಣ ಮಾಡಿದ್ದಾರೆ.
ಜಾತಿ, ಪಕ್ಷ ನೋಡದೇ ನಾನು ಕೆಲಸ ಮಾಡಿದ್ದೇನೆ. ನೀವು ಬೆಳಿಸಿದ ನಿಮ್ಮ ಮನೆ ಮಗ ನಾನು. ನೀವು ಬೆಳೆಸಿದ ನಿಮ್ಮ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ. ಎನ್‌ಡಿಎ ಅಭ್ಯರ್ಥಿಯನ್ನ ಈ ಕ್ಷೇತ್ರದಲ್ಲಿ ನಿಲ್ಲಿಸುತ್ತೇವೆ, ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.